ಚಕ್ಕೋತಾ ಹಣ್ಣಿನ ಸಾಸಿವೆ

ಚಕ್ಕೋತಾ ಹಣ್ಣಿನ ಸಾಸಿವೆ

ಬೇಕಿರುವ ಸಾಮಗ್ರಿ

ಚಕ್ಕೋತಾ ಹಣ್ಣಿನ ತಿರುಳು ೧ ಕಪ್, ತೆಂಗಿನ ಕಾಯಿ ತುರಿ ೧ ಕಪ್, ಸಾಸಿವೆ ೧ ಚಮಚ, ಒಣ ಮೆಣಸು ೩-೫, ತುಪ್ಪ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು.

ತಯಾರಿಸುವ ವಿಧಾನ

ಚಕ್ಕೋತಾ ತಿರುಳಿಗೆ ಉಪ್ಪು ಮತ್ತು ಬೆಲ್ಲ ಬೆರೆಸಿ ಇಡಬೇಕು. ತೆಂಗಿನಕಾಯಿ ತುರಿಗೆ ಒಂದು ಚಮಚ ಸಾಸಿವೆ, ಒಣಮೆಣಸು ಕುಮ್ಟೆ (ಖಾರ ತುಂಬಾ ಬೇಕಾದರೆ ಎರಡು ಕಾಯಿಮೆಣಸು) ಸೇರಿಸಿ ರುಬ್ಬಿ, ತಿರುಳಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಒಗ್ಗರಣೆ ತುಪ್ಪದಲ್ಲಿ ಕೊಡಬೇಕು. ರುಚಿಯಾದ ಸಾಸಿವೆ ರೆಡಿ.(ಹುಳಿ ಮತ್ತು ಒಗರು ಇರುವ ಕಾರಣ ಮೊಸರು,ಮಜ್ಜಿಗೆ ಹಾಕುವುದು ಬೇಡ)

-ರತ್ನಾ ಭಟ್ ತಲಂಜೇರಿ