ಜಾಮೂನು ಹುಡಿಯ ಬರ್ಫಿ
ಬೇಕಿರುವ ಸಾಮಗ್ರಿ
ಜಾಮೂನು ಮಿಕ್ಸ್ ಹುಡಿ ೧ ಕಪ್, ತುಪ್ಪ ೧ ಕಪ್, ಹಾಲು ೧ ಕಪ್, ಸಕ್ಕರೆ ೨ ಕಪ್ ( ನಿಮ್ಮ ರುಚಿಗೆ ಬೇಕಾದಷ್ಟು), ಸ್ವಲ್ಪ ಗೋಡಂಬಿ. ಏಲಕ್ಕಿ ಹುಡಿ
ತಯಾರಿಸುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದು ಬಿಸಿಯಾಗುವಾಗ ಅದಕ್ಕೆ ಜಾಮೂನು ಹುಡಿಯನ್ನು ಹಾಕಿ ಕಲಸಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಮಗುಚುತ್ತಾ ಇರಬೇಕು. ಉಳಿದ ಅರ್ಧ ಕಪ್ ತುಪ್ಪವನ್ನು ಹಾಕಿ ಮಗುಚಿ, ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಹಾಗೂ ಏಲಕ್ಕಿ ಹುಡಿಯನ್ನು ಸೇರಿಸಿ. ಪಾಕ ಗಟ್ಟಿಯಾಗುತ್ತಾ ಬರುವಾಗ ಒಲೆಯಿಂದ ಕೆಳಗಿಳಿಸಿ. ಒಂದು ಪ್ಲೇಟಿಗೆ ಹಾಕಿ ಬರ್ಫಿಯ ಆಕಾರದಲ್ಲಿ ಕತ್ತರಿಸಿ.
ಮಾಹಿತಿ: ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಗುಲಾಬ್ ಜಾಮೂನು ಮಿಕ್ಸ್ ನ ಹುಡಿಯ ಪ್ಯಾಕೇಟ್ ಗಳು ಲಭ್ಯವಿದೆ. ಒಂದು ತೆಗೆದುಕೊಂಡರೆ ಇನ್ನೊಂದು ಉಚಿತವಿದೆ. ಆ ಸಂದರ್ಭದಲ್ಲಿ ಯಾವಾಗಲೂ ಗುಲಾಬ್ ಜಾಮೂನು ತಯಾರಿಸುವ ಬದಲು ಅದೇ ಹುಡಿಯಿಂದ ಈ ರೀತಿಯ ಬರ್ಫಿಗಳನ್ನು ತಯಾರಿಸಬಹುದು.