ಪಡುವಲಕಾಯಿಯ ಬೀಜದ ದೋಸೆ
ಬೇಕಿರುವ ಸಾಮಗ್ರಿ
೨ ಮಧ್ಯಮ ಗಾತ್ರದ ಪಡುವಲ ಕಾಯಿಯ ಬೀಜಗಳು, ಬೆಳ್ತಿಗೆ ಅಕ್ಕಿ ೧/೨ ಕಪ್, ನೀರುಳ್ಳಿ ೧, ಕಾಯಿ ಮೆಣಸು ೨-೩, ಮೆಂತೆ ೨ ಚಮಚ, ಉದ್ದಿನ ಬೇಳೆ ೨ ಚಮಚ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಎಣ್ಣೆ
ತಯಾರಿಸುವ ವಿಧಾನ
ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ನೀರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಆ ರುಬ್ಬಿದ ಮಿಶ್ರಣಕ್ಕೆ ಬೆರೆಸಿರಿ. ದೋಸೆಯ ಕಾವಲಿಯನ್ನು ಒಲೆಯ ಮೇಲಿಟ್ಟು ಸಣ್ಣ ಸಣ್ಣ ದೋಸೆ ಆಕಾರದಲ್ಲಿ ಈ ರುಬ್ಬಿದ ಮಿಶ್ರಣವನ್ನು ಹಾಕಿರಿ. ಬೇಕಾದಲ್ಲಿ ಕಾವಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿರಿ. ದೋಸೆಯನ್ನು ಎರಡೂ ಬದಿ ಕಾಯಿಸಿರಿ. ಬಿಸಿ ಬಿಸಿಯಾಗಿ ಊಟದ ಜೊತೆ ತಿನ್ನಲು ಹಿತಕರ