ಎಳೇ ಗುಜ್ಜೆ ಪಲ್ಯ

ಎಳೇ ಗುಜ್ಜೆ ಪಲ್ಯ

ಬೇಕಿರುವ ಸಾಮಗ್ರಿ

ಎಳೇ ಗುಜ್ಜೆ (ಹಲಸಿನ ಕಾಯಿ) ೧ ಸಣ್ಣದು, ಅರಸಿನ ಹುಡಿ ಅರ್ಧ ಚಮಚ, ಹುಣಸೆ ಹುಳಿ ಸ್ವಲ್ಪ, ಮಜ್ಜಿಗೆ, ರುಚಿಗೆ ಉಪ್ಪು, ಮೆಣಸಿನ ಹುಡಿ, ಬೆಲ್ಲ, ತೆಂಗಿನ ಕಾಯಿ ತುರಿ ಕಾಲು ಕಪ್, ಎಣ್ಣೆ

ತಯಾರಿಸುವ ವಿಧಾನ

ಎಳತು ಗುಜ್ಜೆಯ ಹೊರಗಿನ ಸಿಪ್ಪೆ ಮತ್ತು ಒಳಗಿನ ಗೂಂಜನ್ನು ತೆಗೆದು ತುಂಡುಗಳಾಗಿಸಿ. ಅರಶಿನ ಹುಡಿ, ಹುಣಿಸೇಹುಳಿ ರಸ, ಇಲ್ಲವೇ ಹುಳಿ ಮಜ್ಜಿಗೆ ಸೇರಿಸಿ ಐದು ನಿಮಿಷ ಬಿಟ್ಟುನೀರನ್ನು ಬಸಿಯಿರಿ. ಹೋಳುಗಳನ್ನು ಉಪ್ಪು, ಮೆಣಸಿನ ಹುಡಿ, ಸ್ವಲ್ಪ ಹುಣಿಸೇರಸ (ಒಂದು ಚಮಚ) ಬೆಲ್ಲ ಸೇರಿಸಿ ಬೇಯಿಸಿ. ಬೆಂದ ತುಂಡುಗಳನ್ನು ಜಜ್ಜಿಟ್ಟುಕೊಂಡು (ಸಣ್ಣಗೆ ತುಂಡು ಮಾಡಿ ಬೇಯಿಸಬಹುದು) ಒಗ್ಗರಣೆಯೊಂದಿಗೆ ಮಿಶ್ರ ಮಾಡಿ, ತೆಂಗಿನಕಾಯಿ ತುರಿ (ಎಸಳು) ಸೇರಿಸಿ ೧೦ ನಿಮಿಷ ಬೇಯಿಸಿ ಮುಚ್ಚಿಡಿ. ಈ ಪಲ್ಯಕ್ಕೆ ಸ್ವಲ್ಪ ಖಾರ ಮತ್ತು ಎಣ್ಣೆ ಜಾಸ್ತಿ ಹಾಕಿದರೆ ರುಚಿ ಹೆಚ್ಚು. ಪಲ್ಯ ರೆಡಿ. ಇದೇ ಜಜ್ಜಿದ ಗುಜ್ಜೆಗೆ ಖಾರ ಮಸಾಲೆ ಹಾಕಿ ಸಹ ಪಲ್ಯ ಮಾಡಬಹುದು.

ಈ ಎಳೇ ಗುಜ್ಜೆಯಿಂದ ಉಪ್ಪಿನಕಾಯಿ, ಕಾಳುಗಳನ್ನು ಸೇರಿಸಿ ಸಾಂಬಾರು, ಮುದ್ದೆ ಹುಳಿ, ಮಜ್ಜಿಗೆಹುಳಿ, ಪೋಡಿ ಮಾಡಬಹುದು.

-ರತ್ನಾ ಕೆ.ಭಟ್,ತಲಂಜೇರಿ