ಬೂದು ಬಾಳೆಕಾಯಿ ಚಿಪ್ಸ್
ಬೇಕಿರುವ ಸಾಮಗ್ರಿ
ಬೂದು ಬಾಳೇ ಕಾಯಿ (ಬೂದಿ ಬಾಳೆ) ಬೇಕಾದಷ್ಟು, ಅರಸಿನ ಹುಡಿ ಸ್ವಲ್ಪ, ಉಪ್ಪು, ಕರಿಯಲು ಎಣ್ಣೆ, ಸ್ವಲ್ಪ ಮೆಣಸಿನ ಹುಡಿ
ತಯಾರಿಸುವ ವಿಧಾನ
ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅರಶಿನ ಹುಡಿ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ನಂತರ ನೀರನ್ನೆಲ್ಲ ಬಸಿಯಬೇಕು. ಒಂದು ಸ್ವಚ್ಛ ಬಟ್ಟೆಯಲ್ಲಿ ಹರವಿದರೆ ನೀರಿನಂಶ ಬೇಗ ಆರುತ್ತದೆ. ಕಾದ ಎಣ್ಣೆಗೆ ಚಿಪ್ಸ್ ಸ್ಲ್ಯೆಸರಲ್ಲಿ ನೇರವಾಗಿ ಕತ್ತರಿಸಿ ಹಾಕಿ ಕರಿಯಿರಿ, ಹದ ಕರಿದಾಗ ಉಪ್ಪು ನೀರು ಚಿಮುಕಿಸಿ ಪುನಃ ಸ್ವಲ್ಪ ಹೊತ್ತು ಕಾಯಿಸಬೇಕು. ಗರಿಗರಿಯಾದಾಗ ಎಣ್ಣೆಯಿಂದ ಹೊರ ತೆಗೆಯಿರಿ. (ಖಾರ ಬೇಕಾದಲ್ಲಿ ಉಪ್ಪು ನೀರಿಗೆ ಮೆಣಸಿನ ಹುಡಿ, ಅರಶಿನಹುಡಿ ಅಥವಾ ಸಾಂಬಾರ್ ಪೌಡರ್ ಮಿಶ್ರ ಮಾಡಬಹುದು). ಈಗ ಗರಿಗರಿ ಬಾಳೆಕಾಯಿ ಚಿಪ್ಸ್ ರೆಡಿ.
-ರತ್ನಾ ಕೆ.ಭಟ್, ತಲಂಜೇರಿ