ಕ್ಯಾಬೇಜ್ ಖಾರ ದೋಸೆ

ಕ್ಯಾಬೇಜ್ ಖಾರ ದೋಸೆ

ಬೇಕಿರುವ ಸಾಮಗ್ರಿ

ಕ್ಯಾಬೇಜ್ ೧ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ತೊಗರಿಬೇಳೆ ಕಾಲು ಕಪ್, ಕೆಂಪು ಮೆಣಸು ೪-೫, ರುಚಿಗೆ ತಕ್ಕಷ್ಟು ಉಪ್ಪು. ಹದ ಗಾತ್ರದ ಈರುಳ್ಳಿ ೧, ಚಿಟಿಕೆಯಷ್ಟು ಇಂಗು

ತಯಾರಿಸುವ ವಿಧಾನ

ಅಕ್ಕಿ ಮತ್ತು ತೊಗರಿಬೇಳೆಯನ್ನು ನೀರಿನಲ್ಲಿ ೨ ಗಂಟೆ ನೆನೆಸಿ. ನಂತರ ಅದಕ್ಕೆ ಕೆಂಪು ಮೆಣಸು, ಉಪ್ಪು, ಇಂಗು ಸೇರಿಸಿ ಕಡೆಯಿರಿ. ಹಿಟ್ಟು ಹೆಚ್ಚು ನಯವಾಗದಂತೆ ಕಡೆದು ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ ಹಾಗೂ ಈರುಳ್ಳಿಯನ್ನು ಸೇರಿಸಿ. ಕಾವಲಿಯನ್ನು ಒಲೆಯ ಮೇಲೆ ಕಾಯಿಸಿ ಅದಕ್ಕೆ ಈ ಮಿಶ್ರಣವನ್ನು ರೊಟ್ಟಿ ತಟ್ಟುವಂತೆ ಕೈಯಿಂದ ತಟ್ಟಿ. ಸರಿಯಾಗಿ ಕಾದ ಬಳಿಕ ಕಾವಲಿಯಿಂದ ತೆಗೆಯಿರಿ. ಬಿಸಿ ಬಿಸಿಯಾಗಿ ಊಟಕ್ಕೆ ಹಿತಕರವಾಗಿರುತ್ತದೆ.( ಖಾರ ಜಾಸ್ತಿ ಬೇಕಾದಲ್ಲಿ ಮೆಣಸನ್ನು ಜಾಸ್ತಿ ಹಾಕಿ)