ಕಣಿಲೆ ಮತ್ತು ಹಲಸಿನ ಬೀಜದ ಸುಕ್ಕ
ಕಣಿಲೆ ಅಥವಾ ಕಳಿಲೆ (ಎಳೆ ಬಿದಿರು) ೧ ಕಪ್, ಹಲಸಿನ ಬೀಜ ೭-೮, ತೆಂಗಿನ ತುರಿ - ಅರ್ಧ ಕಪ್, ಹುಣಸೆ ಹುಳಿ- ಸ್ವಲ್ಪ, ಹುರಿದ ಕೆಂಪು ಮೆಣಸು- ೭-೮, ಕೊತ್ತಂಬರಿ ೨ ಚಮಚ, ಮೆಂತೆ ಅರ್ಧ ಚಮಚ, ಉದ್ದಿನ ಬೇಳೆ ೨ ಚಮಚ. ರುಚಿಗೆ ಉಪ್ಪು, ಒಗ್ಗರಣೆಗೆ ಹರಿಬೇವಿನ ಸೊಪ್ಪು, ಸ್ವಲ್ಪ ಎಣ್ಣೆ ಹಾಗೂ ಸಾಸಿವೆ.
ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾದ ರುಚಿ ಕಡಿಮೆಯಾಗುತ್ತದೆ. ಹಲಸಿನ ಬೀಜಗಳನ್ನು ಸಣ್ಣದಾಗಿ ಕತ್ತರಿಸಿಟ್ಟು, ನಂತರ ಈ ಕತ್ತರಿಸಿದ ಕಣಿಲೆ ಮತ್ತು ಹಲಸಿನ ಬೀಜವನ್ನು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ೨-೩ ಶೀಟಿ ಬೇಯಿಸಿದರೆ ಸಾಕು.
ಕೊತ್ತಂಬರಿ, ಮೆಂತೆ, ಉದ್ದಿನಬೇಳೆಯನ್ನು ಸ್ವಲ್ಪ ಎಣ್ಣೆ ಹಾಕಿ ಕಾವಲಿಯಲ್ಲಿ ಹುರಿಯಿರಿ. ನಂತರ ಹುರಿದ ಕೆಂಪು ಮೆಣಸು, ಹುಣಸೆ ಹುಳಿ ಮತ್ತು ಉಪ್ಪು ಇವುಗಳನ್ನು ನೀರು ಸೇರಿಸದೇ ಮಿಕ್ಸರ್ ನಲ್ಲಿ ಹಾಕಿ ಹುಡಿ ಮಾಡಿರಿ. ಮೊದಲೇ ಹುರಿದಿಟ್ಟ ಕೊತ್ತಂಬರಿ ಹುಡಿಯನ್ನು ಇದಕ್ಕೆ ಸೇರಿಸಿ ಮತ್ತೆ ಮಿಕ್ಸಿಯಲ್ಲಿ ರುಬ್ಬಿ. ಕೊನೆಗೆ ಅದಕ್ಕೆ ತೆಂಗಿನ ತುರಿಯನ್ನು ನೀರು ಸೇರಿಸದೇ ತರಿತರಿಯಾಗಿ ರುಬ್ಬಿರಿ. ಒಂದು ಕಾವಲಿಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕರಿಬೇವಿನ ಸೊಪ್ಪು, ಸಾಸಿವೆ ಹಾಕಿ ಸ್ವಲ್ಪ ಹುರಿಯಿರಿ. ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಎರಡು ನಿಮಿಷ ಹುರಿಯಿರಿ. ಕೊನೆಗೆ ಮೊದಲೇ ಬೇಯಿಸಿಟ್ಟ ಕಣಿಲೆ ಹಾಗೂ ಹಲಸಿನ ಬೀಜವನ್ನು ಆ ಮಸಾಲೆಗೆ ಸೇರಿಸಿ, ಮಗುಚಿ ೨-೩ ನಿಮಿಷ ಬೇಯಿಸಿ ಒಲೆಯಿಂದ ಕೆಳಗಿಳಿಸಿದರೆ ನಿಮ್ಮ ಸ್ಪೆಷಲ್ ಸುಕ್ಕಾ ತಯಾ