ನೇಂದ್ರ ಬಾಳೆ ಸಿಹಿ

ನೇಂದ್ರ ಬಾಳೆ ಸಿಹಿ

ಬೇಕಿರುವ ಸಾಮಗ್ರಿ
  • ‍‍ನೇಂದ್ರ ಬಾಳೆಹಣ್ಣು - ನಾಲ್ಕು ಅಥವಾ ಐದು
  • ‍ಸಕ್ಕರೆ
  • ‍ತುಪ್ಪ 
ತಯಾರಿಸುವ ವಿಧಾನ
  • ‍ನೇಂದ್ರ ಬಾಳೆಹಣ್ಣನ್ನು ‍ದುಂಡಗೆ ತುಂಡರಿಸಿಟ್ಟುಕೊಳ್ಳಿ 
  • ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ‍ಕೆಂಪಗೆ ಕಾಯಿಸಿ
  • ಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿ
  • ಬಿಸಿ ಬಿಸಿ ಇರುವಾಗಲೆ ಸಕ್ಕರೆ ಸೇರಿಸಿ, ಸವಿಯಿರಿ 

 

ನೇಂದ್ರ ಬಾಳೆಹಣ್ಣು ಮಂಗಳೂರು, ಉಡುಪಿ, ಕೇರಳ ದಲ್ಲಿ ಸಿಗುವಂಥಹ ಬಾಳೆಹಣ್ಣಿನ ‍ಪ್ರಭೇಧ. ‍

ಇದರ ಪೋಡಿ‍/ ಬಜ್ಜಿ  ಕೂಡ ಮಾಡುತ್ತಾರೆ.  

Comments

Submitted by ಗಣೇಶ Mon, 09/30/2013 - 23:59

ಸುಮ ಅವರೆ, ಈ ಸಲ ಪ್ಲೇಟು ತುಂಬಾ ಸ್ವೀಟು :) ನೇಂದ್ರ ಬಾಳೆಹಣ್ಣು ಮನೆಗೆ ತಂದರೆ- ಸಣ್ಣದಾಗಿ ಕತ್ತರಿಸಿ, ಜೇನು ಸಕ್ಕರೆ ಸೇರಿಸಿ ತಿನ್ನುವ ಅಭ್ಯಾಸ. ಮುಂದಿನ ಸಲ ಈ ಹೊಸ ರುಚಿ ಮಾಡುವೆ.

Submitted by ಸುಮ ನಾಡಿಗ್ Tue, 10/01/2013 - 14:39

ಗಣೇಶಣ್ಣ, ಅದು ಜೇನು ಅಥವಾ ಸಕ್ಕರೆ ಎಂದಾಗಬೇಕಿತ್ತೆ? ಅಥವಾ ನೀವು ಜೇನು, ಸಕ್ಕರೆ ಎರಡನ್ನೂ ಸೇರಿಸಿ ನೇಂದ್ರಬಾಳೆ ಸವಿಯುತ್ತೀರೊ? :-)

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..