ಅವಲಕ್ಕಿ ಕಟ್ಲೆಟ್

ಅವಲಕ್ಕಿ ಕಟ್ಲೆಟ್

ಬೇಕಿರುವ ಸಾಮಗ್ರಿ

 

  • ಎರಡು ಕಪ್ ಅವಲಕ್ಕಿ
  • ಕಾಲು ಕಪ್ ಹೆಸರು ಬೇಳೆ (ಒಂದು ಗಂಟೆ ಮುಂಚಿತವಾಗಿ ನೆನೆಸಿಟ್ಟುಕೊಳ್ಳಲಬೇಕು)
  • ಹಸಿರು ಮೆಣಸು (ಖಾರಕ್ಕೆ ತಕ್ಕಂತೆ)
     
  • ಒಂದು ಕಪ್ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು
  • ಕಾಲು ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು

     

  • ೧ ಚಮಚ ನಿಂಬೆ ಹಣ್ಣಿನ ರಸ
  • ೧ ಚಮಚ ಸಕ್ಕರೆ
  • ರುಚಿಗೆ ತಕ್ಕಂತೆ ಉಪ್ಪು
     
ತಯಾರಿಸುವ ವಿಧಾನ

ಅವಲಕ್ಕಿಯನ್ನು ಒಮ್ಮೆ ತೊಳೆದಿಟ್ಟುಕೊಂಡು ನೆಂದಿರುವ ಹೆಸರು ಬೇಳೆ ಹಾಗೂ ಹಸಿರು ಮೆಣಸಿನಕಾಯಿಯೊಂದಿಗೆ ಮಿಕ್ಸರಿನಲ್ಲಿ ನೀರು ಹಾಕದೆ ಸ್ವಲ್ಪ ನುಣುಪಾಗಿಸಿಟ್ಟುಕೊಳ್ಳಿ.

ಇದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು, ನಿಂಬೆ ರಸ‌, ಸಕ್ಕರೆ, ಉಪ್ಪು ಹಾಕಿ ಕಲೆಸಿ.

ಮತ್ತಷ್ಟು ಖಾರ ಬೇಕಿದ್ದರೆ ಇನ್ನಷ್ಟು ಹಸಿರು ಮೆಣಸಿನಕಾಯಿ ಹೆಚ್ಚಿ ಇದಕ್ಕೆ ಹಾಕಬಹುದು.

ಕಲೆಸಿಟ್ಟುಕೊಂಡದ್ದನ್ನು ಚಪ್ಪಟೆಯಾಗಿ ‍ಪುಟ್ಟ ಪುಟ್ಟ ತಟ್ಟೆಯಾಕಾರದಲ್ಲಿ ಕಟ್ಲೆಟ್ ತಟ್ಟಿಟ್ಟುಕೊಳ್ಳಿ.

ಹೆಂಚು ಅಥವ‌ ಪ್ಯಾನಿನಲ್ಲಿ ಐದು ಚಮಚ‌ ತೆಂಗಿನ‌ ಎಣ್ಣೆ ಕಾಯಿಸಿ ಕಟ್ಲೆಟ್ಟನ್ನು ಫ್ರೈ ಮಾಡಿ. ಗರಿಗರಿಯಾದ ನಂತರ ತಿರುವಿಹಾಕಿ. ಹೀಗೆ ತಿರುವಿಹಾಕುವ ಮುನ್ನ ಬೇಕಿದ್ದರೆ ನಾಲ್ಕೈದು ಕಾಳು ಎಳ್ಳು ಕಟ್ಲೆಟ್ ಮೇಲೆ ಉದುರಿಸಿ ತಿರುವಿಹಾಕಬಹುದು (ಗರಿಗರಿಯಾಗುವ‌ ತನಕ‌ ಫ್ರೈ ಮಾಡದಿದ್ದರೆ ತಿನ್ನಲು ಇದು ರುಚಿಯಾಗಿರುವುದಿಲ್ಲ)