‍ಕ್ಯಾಬೇಜ್ ಗಟ್ಟಿ

‍ಕ್ಯಾಬೇಜ್ ಗಟ್ಟಿ

ಬೇಕಿರುವ ಸಾಮಗ್ರಿ

1. ದೋಸೆ ಅಕ್ಕಿ ೧ ಕಪ್ 

2. ಕಾಯಿ ತುರಿ ೧ ಕಪ್ 

3. ಉಪ್ಪು ರುಚಿಗೆ ತಕ್ಕಷ್ಟು 

4. ಬೆಲ್ಲ ರುಚಿಗೆ ತಕ್ಕಷ್ಟು 

5. ಹುಳಿ ರುಚಿಗೆ ತಕ್ಕಷ್ಟು 

6. ಕೊತ್ತಂಬರಿ ಬೀಜ ೧/೪ ಕಪ್ 

7.  ಜೀರಿಗೆ ಸ್ವಲ್ಪ 

8. ಬ್ಯಾಡಗಿ ಮೆಣಸು (ಖಾರಕ್ಕೆ ತಕ್ಕಷ್ಟು) 

9. ಕ್ಯಾಬೇಜ್ ೧ ಕಪ್ ‍

ತಯಾರಿಸುವ ವಿಧಾನ
  • ಬೆಳಗ್ಗೆ ಎದ್ದೊಡನೆ ದೋಸೆ ಅಕ್ಕಿ ನೆನೆಸಿಟ್ಟುಕೊಳ್ಳಿ.
  • ಕಾಯಿ ತುರಿ, ಉಪ್ಪು, ಹುಳಿ, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸು ಸೇರಿಸಿ ರುಬ್ಬಿಕೊಳ್ಳಿ.
  • ಈ ಮಿಶ್ರಣಕ್ಕೆ ನೆನೆದ ಅಕ್ಕಿಯನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
  • ಹಾಗೆ ತಯಾರಾದ ಹಿಟ್ಟಿಗೆ ಕ್ಯಾಬೇಜ್ ಅನ್ನು ಜೊತೆ ಸೇರಿಸಿ ಇಡಿ.
  • Cooker ಅಥವಾ ಇಡ್ಲಿ ಅಟ್ಟದಲ್ಲಿ ನೀರು ಹಾಕಿ ಒಲೆಯ ಮೇಲೆ ಇಡಿ.
  • ಒಂದು ಅಗಲದ ಪಾತ್ರೆಯನ್ನು ನೀರಿನ ಮೇಲಿಟ್ಟು, ತಯಾರಿಸಿದ ಮಿಶ್ರಣವನ್ನು ಒಂದೊಂದೆ ಹಿಡಿಯಂತೆ, ಈ ಪಾತ್ರೆಯಲ್ಲಿ ಇಡಿ.
  • ಹವೆ/ಹಬೆಯಲ್ಲಿ ಬೇಯಿಸಿ.
  • ೨೦ ನಿಮಿಷದಲ್ಲಿ ಕ್ಯಾಬೇಜ್ ಗಟ್ಟಿ ರೆಡಿ. 

ಟಿಪ್:

  • ರುಬ್ಬಿಕೊಳ್ಳುವಾಗ ನೀರು ಬೇಕಿರುವಷ್ಟೇ ಹಾಕಿ, ಇಲ್ಲವಾದರೆ ಗಟ್ಟಿ ಕಟ್ಟಲು ಕಷ್ಟವಾದೀತು.
  • ಕ್ಯಾಬೇಜ್ ಗಟ್ಟಿಯನ್ನು ಬೆಣ್ಣೆಯೊಂದಿಗೆ ಸವಿದರೆ, ಬಲು ರುಚಿ. ‍

 

Comments

Submitted by ಗಣೇಶ Thu, 09/19/2013 - 00:12

ಸುಮ ಅವರೆ, ನಿಮ್ಮ ಕ್ಯಾಬೇಜ್ ಗಟ್ಟಿ ಎಕ್ಸ್ಪ್ಲೋರರ್‌ನಲ್ಲಿ ಸರಿಯಾಗಿದೆ. ಫೈರ್ ಫಾಕ್ಸ್‌ನಲ್ಲಿ "ಕಂಯಾಬೇಜ್ ಗಟ್ಟಿ"ಯಾಗಿದೆ.:) ಬೆಂದದ್ದು ಜಾಸ್ತಿಯಾಯಿತೆ? :) ಬೆಣ್ಣೆ ತಂದ ಮೇಲೆ ಮಾಡಿ ನೋಡುವೆ.

Submitted by ಗಣೇಶ Fri, 09/20/2013 - 00:32

In reply to by ಸುಮ ನಾಡಿಗ್

ಸುಮ ಅವರೆ, ನಿಮ್ಮ ಲೇಖನವನ್ನು ರಾತ್ರಿ ಓದಿ ನನ್ನ ಪತ್ನಿಯ ಬಳಿ ಹೇಳಿದ್ದೆ. ಬೆಳಗ್ಗೆ ಕ್ಯಾಬೇಜ್ ಗಟ್ಟಿ ರೆಡಿ! ಬಹಳ ಚೆನ್ನಾಗಿತ್ತು. ತುಪ್ಪ ಹಾಕಿಕೊಂಡು ತಿಂದೆ. ಅದರದೇ ಮುಂದುವರೆದ ರೆಸಿಪಿ-
ಸಂಜೆಗೆ ಉಳಿದ ಕ್ಯಾಬೇಜ್ ಗಟ್ಟಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ (ಪತ್ರೊಡೆ ಒಗ್ಗರಣೆ ಹಾಕಿ ಮಾಡುತ್ತೇವಲ್ಲ ಅದೇ ತರಹ). ಬಾಣಲೆಯಲ್ಲಿ ಒಗ್ಗರಣೆ ಹಾಕಿ, ಅದರಲ್ಲೇ ಈರುಳ್ಳಿ(!) ಹಾಕಿ ಫ್ರೈ ಮಾಡಿ, ಪುಡಿಮಾಡಿದ ಕ್ಯಾಬೇಜ್ ಗಟ್ಟಿಯನ್ನು ಮಿಕ್ಸ್ ಮಾಡಿ, ಕೊನೆಯಲ್ಲಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸ್ವಲ್ಲ ಉದುರಿಸಿ ಕಲ್ಸಿ ಕೊಡಿ. ಸಂಜೆಗೆ ಇದೇ ಮಾಡಿದ್ದೆವು. ಚೆನ್ನಾಗಿತ್ತು. ತಮಗೆ ಧನ್ಯವಾದಗಳು.