ನೆಲಕಡಲೆ ಟಿಕ್ಕಿ
ಬೇಕಿರುವ ಸಾಮಗ್ರಿ
- ಚೆನ್ನಾಗಿ ಕೆಂಪಗೆ ಹುರಿದಿಟ್ಟ ನೆಲಕಡಲೆ ಬೀಜ ವನ್ನು ವರಟಾಗಿ ರುಬ್ಬಿ 1/2 ಕಪ್
- ಕಡಲೆ ಹಿಟ್ಟು 1/2 ಕಪ್
- ಗೋಧಿ ಹಿಟ್ಟು 1/3 ಕಪ್
- ಸಕ್ಕರೆ ರುಚಿಗೆ
- ಉಪ್ಪು ರುಚಿಗೆ
- ಪಾಲಕ್ ಸೊಪ್ಪು 1/2 ಕಪ್
- ಸಣ್ಣಗೆ ಹೆಚ್ಚಿದ ಹಸಿರು ಮೆಣಸು
- ಲಿಂಬೆ ರಸ 1 ಚಮಚ
- ಕರಿಯಲು ತಕ್ಕ ಎಣ್ಣೆ
ತಯಾರಿಸುವ ವಿಧಾನ
- ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ. ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ.
- ತವಾ/ nonstick pan ನಲ್ಲಿ 2 ರಿಂದ 3 ಚಮಚ ಎಣ್ಣೆ ಹಾಕಿ
- ತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟು ಅಗಲಕ್ಕೆ ತಟ್ಟಿ, ಕಾದ ಕಾವಲಿಯ ಮೇಲೆ ಒಂದೊಂದಾಗಿ ಇಡಿ.
- ಎಣ್ಣೆ ಬೇಕಾದಲ್ಲಿ ಇನ್ನಷ್ಟು ಬಳಸಬಹುದು.
- ಎರಡು ಬದಿಯಲ್ಲಿ ಕೆಂಪಾಗಿ ಕಾಯಿಸಿ (ಈ ರೀತಿ ಕಾಯಿಸುವ ವಿಧಾನಕ್ಕೆ shallow fry ಎಂದು english ನಲ್ಲಿ ಹೇಳುತ್ತಾರೆ)
- ಬಿಸಿ ಬಿಸಿ ಬಡಿಸಿ.
ರುಚಿ ಕೃಪೆ: ತರಲಾ ದಲಾಲ್. ಇವರು ತಮ್ಮ ಪುಸ್ತಕದಲ್ಲಿ, ಈ ರುಚಿ ವಿಟಾಮಿನ್ ಗಳಿಂದ ಕೂಡಿದೆ ಎಂದು ಬರೆದಿದ್ದಾರೆ.
Comments
ಉ: ನೆಲಕಡಲೆ ಟಿಕ್ಕಿ
ರಾತ್ರಿ ಲೇಟಾಗಿ ಸಂಪದ ಎಂಟ್ರಿ ಆಗುವುದರಿಂದ ನನಗೆ ತುಂಬಾ ಲಾಸ್. ಒಂದೇ ಟಿಕ್ಕಿ ಉಳಿದಿದೆ.:)
ಟಿ.ವಿಯ ಅಡುಗೆ ಕಾರ್ಯಕ್ರಮದಲ್ಲಿ ನೋಡಿದ "ಎಗ್‌ಲೆಸ್ ಕೇಕ್" ಒಮ್ಮೆ ಮಾಡಿದ್ದೆವು. ಸಂಪದದಲ್ಲಿ ಹಾಕಲೆಂದು ತಯಾರಿ ಮಾಡುವ ಪ್ರತೀ ಹಂತದಲ್ಲೂ ಫೋಟೋ ತೆಗೆದೆ. ಮಾಡಿಯಾದ ಮೇಲೆ ತಿನ್ನಲು ಪ್ರಾರಂಭಿಸಿದ್ದೇ...ಕೊನೆಗೆ ಒಂದು ತುಂಡು ಉಳಿದಾಗ ಫೋಟೋದ ನೆನಪಾಯಿತು.:) ಒಂದೇ ಟಿಕ್ಕಿ ನೋಡಿದಾಗ ನೆನಪಾಯಿತು..
In reply to ಉ: ನೆಲಕಡಲೆ ಟಿಕ್ಕಿ by ಗಣೇಶ
ಉ: ನೆಲಕಡಲೆ ಟಿಕ್ಕಿ
Eggless ಕೇಕ್ ರುಚಿ (recipe) ಕಳುಹಿಸಿ ಕೊಡಿ. ನಾನು ತಯಾರಿಸಿ ಅದರ ಪೂರ್ಣ ಫೋಟೋ ಹಾಕುವೆ.
ಜೊತೆಗೆ ರುಚಿಯ ಕೃಪೆ ನಿಮ್ಮದಾಗಿರುತ್ತದೆ :P..
In reply to ಉ: ನೆಲಕಡಲೆ ಟಿಕ್ಕಿ by ಸುಮ ನಾಡಿಗ್
ಉ: ನೆಲಕಡಲೆ ಟಿಕ್ಕಿ
ಸುಮ ಅವರೆ, "ಜೊತೆಗೆ ರುಚಿಯ ಕೃಪೆ ನಿಮ್ಮದಾಗಿರುತ್ತದೆ.." - :) ಕೃಪೆ ಟಿ.ವಿಯ ಯವುದೋ ಚಾನಲ್‌ನ ಅಡುಗೆ ಕಾರ್ಯಕ್ರಮ. ಟಿಕ್ಕಿ ಖಾಲಿ ಮಾಡಿದ್ದು ನೋಡಿದಾಗ "ಕೇಕ್‌ನ ಪೂರ್ಣ ಫೋಟೋ" ಹಾಕುವಿರಿ ಎಂಬ ನಂಬಿಕೆ ನನಗಿಲ್ಲ:). ಫೋಟೋಗಳು ಸಿಕ್ಕಿದರೆ ಈ ಶನಿವಾರವೇ ಹಾಕುವೆ.
ಉ: ನೆಲಕಡಲೆ ಟಿಕ್ಕಿ
ಈ ಬಾನುವಾರ ನಾನು ಟ್ರೈ ಮಾಡುವೆ :)
ಉ: ನೆಲಕಡಲೆ ಟಿಕ್ಕಿ
ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ಸಿಂಗಪುರದಲ್ಲಿ ಆಗಾಗ್ಗೆ ಪೂರ್ಣ ಶಾಖಾಹಾರಿ / ಸಾಧ್ಯವಿದ್ದಷ್ಟು ಆರೋಗ್ಯಪೂರಕ ಹೊಸರುಚಿ ಪ್ರಯೋಗ ಮಾಡುತ್ತಿರುತ್ತಾರೆ. ಅವರ ರುಚಿಮೂಲ ಕೇಳಿದ್ದಕ್ಕೆ ಈ ಕೆಳಗಿನ ಸೈಟುಗಳನ್ನು ಹೆಸರಿಸಿದರು. ಉಪಯೋಗವಾದೀತಾ ನೋಡಿ (ಲಿಂಕು ತೆರೆಯಲು ತೊಂದರೆಯಾಗದೆಂದು ಭಾವಿಸುವೆ)
All these are totally eggless
Very innovative : http://gayathriscook...
Beautiful presentation with unfailing recipes : http://www.divinetas...
Great variety of egg replacers and very healthy bend of mind :http://www.egglessco...
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ನೆಲಕಡಲೆ ಟಿಕ್ಕಿ by nageshamysore
ಉ: ನೆಲಕಡಲೆ ಟಿಕ್ಕಿ
ಲಿಂಕ್ ತೆರಯಲು ತೊಂದರೆಯಾಗಲಿಲ್ಲ.
ಒಂದು ಉತ್ತಮ ಬ್ಲಾಗ್ ಪರಿಚಯ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.