ಚಗ್ತೆ ಸೊಪ್ಪಿನ ಪಕೋಡ
ಬೇಕಿರುವ ಸಾಮಗ್ರಿ
ಎಳೆ ಚಗ್ತೆ ಸೊಪ್ಪು – 2 ಹಿಡಿ, ಕಡಲೇ ಬೇಳೆ – 1 ಕಪ್, ಬೆಳ್ತಿಗೆ ಅಕ್ಕಿ – ½ ಹಿಡಿ, ಈರುಳ್ಳಿ – 1, ಹಸಿ ಮೆಣಸಿನ ಕಾಯಿ – 3 (ಅಥವಾ ಖಾರಕ್ಕೆ ತಕ್ಕಂತೆ), ಉಪ್ಪು – ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ತಯಾರಿಸುವ ವಿಧಾನ
ಕಡಲೇ ಬೇಳೆ ಮತ್ತು ಅಕ್ಕಿಯನ್ನು ತೊಳೆದು ನೆನೆಸಿಡಿ. ಚಗ್ತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ತೊಳೆದು (ಹಸಿಮೆಣಸಿನಕಾಯಿ) ಸಣ್ಣಗೆ ಹೆಚ್ಚಿಕೊಳ್ಳಿ. ನೆನೆದ ಬೇಳೆ ಮತ್ತು ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಈ ಹಿಟ್ಟಿಗೆ ಹೆಚ್ಚಿದ ಸೊಪ್ಪು, ಮೆಣಸಿನಕಾಯಿ, ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ ಪುಟ್ಟ ಪುಟ್ಟ ಉಂಡೆಗಳನ್ನಾಗಿ ಎಣ್ಣೆಗೆ ಹಾಕಿ ಕೆಂಪಗೆ ಕರಿದು ಕಾಯಿ ಚಟ್ನಿಯೊಂದಿಗೆ ಸವಿಯಿರಿ. ಸಾಯಂಕಾಲ ಟೀಯೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.
Comments
ಉ: ಚಗ್ತೆ ಸೊಪ್ಪಿನ ಪಕೋಡ
ಶೊಭಾ,
ಗರಿ ಗರಿ ಪಕೋಡಾದ ಫೊಟೊ ಕೂಡ ಜೊತೆಗಿದ್ದರೆ, ಇನ್ನಷ್ಟು ರುಚಿ ಸವಿದಂತಾಗುತ್ತಿತ್ತು. :)
In reply to ಉ: ಚಗ್ತೆ ಸೊಪ್ಪಿನ ಪಕೋಡ by ಸುಮ ನಾಡಿಗ್
ಉ: ಚಗ್ತೆ ಸೊಪ್ಪಿನ ಪಕೋಡ
ಸುಮಾ ಅವರೇ, ನೀವು ಹೇಳಿದುದು ಸರಿಯಾಗಿದೆ. ನನ್ನ ಕ್ಯಾಮೆರಾ ಸ್ಕೂಲಿನಲ್ಲಿ ಬಿಟ್ಟು ಬಂದಿದ್ದೆ.. ಹಾಗಾಗಿ ಫೋಟೋ ತೆಗೆಯಲಿಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು..
ಉ: ಚಗ್ತೆ ಸೊಪ್ಪಿನ ಪಕೋಡ
ಶೋಭಾ ಅವರೇ ಚೆನ್ನಾಗಿದೆ ನೀವು ಹೇಳಿದ ಪಕೋಡಾ, ಈ ಸೊಪ್ಪಿನಲ್ಲಿ ಪಾಲಕ್ ಗಿಂತ ಜಾಸ್ತಿ ಪ್ರೋಟೀನ್ ಮತ್ತು ವಿಟಾಮಿನ್ ಗಳಿವೆ. ಚಕ್ತಿ ಸೊಪ್ಪಿನ ಚಟ್ಟಿಯೂ ತುಂಬಾ ಚೆನ್ನಾಗಿರತ್ತೆ ಅಲ್ವಾ? ನಾವಂತೂ ಮಳೆಗಾಲದಲ್ಲಿ ಚಟ್ಟಿ ( ದೋಸೆ) ಮಾಡಿ ತಿನ್ನುತ್ತಿರುತ್ತೇವೆ. ಪಕೋಡಾನೂ ಮಾಡಿ ನೋಡಬೇಕು ಧನ್ಯವಾದಗಳು
In reply to ಉ: ಚಗ್ತೆ ಸೊಪ್ಪಿನ ಪಕೋಡ by gopinatha
ಉ: ಚಗ್ತೆ ಸೊಪ್ಪಿನ ಪಕೋಡ
ಗೋಪಿನಾಥರವರೇ, ನೀವು ಹೇಳಿದುದು ಸರಿಯಾಗಿದೆ. ಚಗ್ತೆ ಸೊಪ್ಪಿನ ಚಟ್ಟಿ ತುಂಬಾ ರುಚಿಯಾಗಿರುತ್ತದೆ. ನಮ್ಮಲ್ಲೂ ಆಗಾಗ ಈ ಸೊಪ್ಪಿನ ಚಟ್ಟಿ ಮಾಡಿ ತಿನ್ನುತ್ತೇವೆ. ಪಕೋಡಾ ಕೂಡ ಚೆನ್ನಾಗಿರುತ್ತದೆ.
ಧನ್ಯವಾದಗಳು.