ಪುದೀನ ಮತ್ತು ಅಮೆರಿಕನ್ ಕಾರ್ನ್ ರೈಸ್
ಬೇಕಾದ ಸಾಮಗ್ರಿ
ಪುದೀನ - ೧/೨ ಕಟ್ಟು
ಕೊತಂಬರಿ- ಸ್ವಲ್ಪ
ಹಸಿ ಮೆಣಸಿನಕಾಯಿ - ೧೦ - ೧೨ (ನಿಮ್ಮ ರುಚಿಗೆ ತಕ್ಕಷ್ಟು)
ಬಾಸುಮತಿ ಅಕ್ಕಿ -೧ ಪಾವು
ಅಮೆರಿಕನ್ ಕಾರ್ನ್ - ೧ ಪ್ಯಾಕೆಟ್
ಈರುಳ್ಳಿ - ೨(ಸಣ್ಣಗೆ ಹಚ್ಚಬೇಕು)
ಜೀರಿಗೆ -೧ ಚಮಚ
ತುಪ್ಪ- ೨ ಚಮಚ
ಮೊಸರು - ೧ ಚಮಚ( ಬೇಕಿದ್ದರೆ ಮಾತ್ರ )
ಎಣ್ಣೆ
ಉಪ್ಪು
ಮೂದಲು ಅಕ್ಕಿಯನ್ನು ತೊಳೆದು ಮತ್ತು ಕಾರ್ನ್ ನನ್ನು ಹಾಕಿ ಅನ್ನ ಮಾಡಿಕೊಳ್ಳಬೇಕು
ನಂತರ ಪುದೀನ,ಕೊತಂಬರಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕು
ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಮತ್ತು ಎಣ್ಣೆ ಹಾಕಿ ಅದು ಕಾದ ನಂತರ ಅದಕ್ಕೆ ಜೀರಿಗೆ ಹಾಕಿಕೊಳ್ಳಬೇಕು
ನಂತರ ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿಯ ಬೇಕು
ನಂತರ ನಾವು ರುಬ್ಬಿಕೊಂಡಿದ್ದ ಪುದೀನ ಎಲ್ಲವನ್ನು ಹಾಕಿ ಆಮೇಲೆ ಸ್ವಲ್ಪ ಒಂದು ಚಮಚ ಮೊಸರು( ಇದು ಬೇಕ್ಕಿದರೆ ಮಾತ್ರ) ಹಾಕಿ ಅದಕ್ಕೆ ಉಪ್ಪು ಬೆರಸಿ ಹಸಿ ವಾಸನೆ ಹೋಗವರೆಗೂ ಬಾಡಿಸಬೇಕು.
ಎಲ್ಲ ಆದ ಮೇಲೆ ಇದಕ್ಕೆ ನಾವು ಮಾಡಿಕೊಂಡಿದ್ದ ಕಾರ್ನ್ ರೈಸ್ ನ ಹಾಕಿ ಚೆನ್ನಾಗಿ ಕಳಿಸಬೇಕು.
ಇವಾಗ ಪುದೀನ ಕಾರ್ನ್ ರೈಸ್ ರೆಡಿ
ಇದಕ್ಕೆ ಮೊಸುರು ಬಜ್ಜಿ ಜೊತೆಗೆ ಕೊಟ್ಟರೆ ತುಂಬ ರುಚಿಯಾಗಿರುತೆ.