ಕೋಕನಟ್ ರೈಸ್
ಬೇಕಿರುವ ಸಾಮಗ್ರಿ
- ಬಾಸ್ ಮತಿ ಅಕ್ಕಿ / ಜೀರಿಗೆ ಅಕ್ಕಿ - ೧ ಕಪ್
- ಕಾಯಿ ಹಾಲು - ೨ ರಿಂದ ೨ ೧/೨ ಕಪ್
ಒಗ್ಗರಣೆಗೆ:
- ಸಾಸಿವೆ
- ಕಡಲೆಬೇಳೆ
- ಕರಿಬೇವು ಸೊಪ್ಪು
- ಎಣ್ಣೆ
- ದ್ರಾಕ್ಷಿ
- ಗೋಡಂಬಿ
- ಸಣ್ಣಗೆ ತುಂಡರಿಸಿದ ಹಸಿರು ಮೆಣಸು
ತಯಾರಿಸುವ ವಿಧಾನ
- ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ
- ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ
- ಒಂದು ಪಾತ್ರೆಯಲ್ಲಿ (cooker ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿ
- ಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬೇಳೆ, ಹಸಿರು ಮೆಣಸು, ಕರಿಬೇವು, ದ್ರಾಕ್ಷಿ, ಗೋಡಂಬಿ ಹಾಕಿ ಒಗ್ಗರಣೆ ಕೊಡಿ
- ಇದಕ್ಕೆ ಕಾಯಿ ಹಾಲು, ಅಕ್ಕಿ ಹಾಕಿ, ಅಕ್ಕಿ ಬೇಯಲು ಬಿಡಿ
ಬಿಸಿ ಬಿಸಿ ಕೊಕನಟ್ ರೈಸಿ ರೆಡಿ.
ಕಾಯಿ ಹಾಲಿನಲ್ಲೇ ಬೆಂದ ಅಕ್ಕಿ, ರುಚಿಯಾಗಿರುತ್ತದೆ.
ನಿಮ್ಮ ಗಮದಲ್ಲಿರಲಿ:
೧ ಕಪ್ ಅಕ್ಕಿಗೆ, ೨ ಕಪ್ ಕಾಯಿ ಹಾಲು ಸಾಕು. ಆದರೆ ಕೆಲವು ವೇಳೆ, ಕೆಲವು ವಿಧದ ಅಕ್ಕಿ ಬೇಯಲು ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಕಾಯಿ ಹಾಲು ಬೇಕಾಗಬಹುದು. ಅದಕ್ಕೆ, ಮೊದಲೆ ೧/೨ ಕಪ್ ಜಾಸ್ತಿ ಕಾಯಿ ಹಾಲು ತಯಾರಿಸಿಡುವುದು ಉತ್ತಮ.
Cooker ನಲ್ಲಿ ೨-೩ ಕೂಗು ಬರಿಸಿಯೂ ತಯಾರಿಸಬಹುದು. ಆದರೆ ಅದರ ರುಚಿ ಸ್ವಲ್ಪ different ಆಗಿರುತ್ತದೆ.
ಮೇಲಿನ ರೀತಿಯಲ್ಲಿ ತಯಾರಿಸುವುದಾದರೆ, ಅಕ್ಕಿ ಬೇಯಲು ಒಲೆಯ ಮೇಲೆ ಇರುವಾಗ, ತಳ ಹಿಡಿಯದಂತೆ ನೋಡಿಕೊಳ್ಳಿ.