ಅವಲಕ್ಕಿ ಒಗ್ಗರಣೆ

ಅವಲಕ್ಕಿ ಒಗ್ಗರಣೆ

ಬೇಕಿರುವ ಸಾಮಗ್ರಿ

‍ಅವಲಕ್ಕಿ ಒಗ್ಗರಣೆ ಎಂದಾಗ ನಿಮ್ಮ ಮನಸ್ಸಿಗೆ ಮೊದಲಿಗೆ ಬರುವುದೆ, ದಪ್ಪ ಅವಲಕ್ಕಿಗೆ ಸ್ವಲ್ಪ ಕಾಯಿ, ನಿಂಬೆ ರಸ ಹಾಕಿ ಮಾಡುವುದು ಎಂದುಕೊಳ್ಳುತ್ತೇನೆ. 

ಆದರೆ ನಾನು ಇಲ್ಲಿ ಪ್ರಕಟಿಸಿರುವ ರುಚಿ ಸ್ವಲ್ಪ different ಆಗಿದೆ. ಸಾಯಂಕಾಲ ತಿಂಡಿಗೆ ಇದು ಸೂಕ್ತವಾಗಿದೆ. 

 

‍ಸಾಮಾಗ್ರಿ:

  • ‍‍‍‍ತೆಳ್ಳನೆ ಅವಲಕ್ಕಿ (ಪೇ‍ಪರ್ ಅವಲಕ್ಕಿ/ ‍ಬಾಂಬೆ ‍‍ಅವಲಕ್ಕಿ) - ೩ ಕಪ್ ‍
  • ‍ಸಕ್ಕರೆ ರುಚಿಗೆ ತಕ್ಕಷ್ಟು ‍
  • ಸಾರಿನ ಪುಡಿ - ಖಾರಕ್ಕೆ ತಕ್ಕಷ್ಟು 
  • ನಿಂಬೆ ರಸ - ೧ ಚಮಚ
  • ಕಾಯಿ ತುರಿ - ೧ ಕಪ್
  • ಉಪ್ಪು ರುಚಿಗೆ ತಕ್ಕಷ್ಟು 
  • ಸಣ್ಣಗೆ ತುಂಡು ಮಾಡಿದ ನೀರುಳ್ಳಿ - ೧ ಕಪ್ 

ಒಗ್ಗರಣೆಗೆ: 

  • ‍ಸಾಸಿವೆ
  • ಕರಿಬೇವು
  • ಕೆಂಪು ಬ್ಯಾಡಗಿ ಮೆಣಸು/ ಒಣ ಮೆಣಸು 
  • ಉದ್ದಿನ ಬೇಳ
  • ತೆಂಗಿನ ಎಣ್ಣೆ (ಬೇರೆ ಎಣ್ಣೆ ಬಳಸಬಹುದು, ಆದರೆ ತೆಂಗಿನ ಎಣ್ಣೆ ಯ ರುಚಿಯ ಮಜಾ ಸಿಗದು :)) 
ತಯಾರಿಸುವ ವಿಧಾನ
  • ‍ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿ
  • ಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ, ಪರಿಮಳ ಬಂದೊಡನೆ ಅದನ್ನು ಮೇಲಿನ ಸಾಮಾಗ್ರಿಗಳಿರುವ ಪಾತ್ರಗೆ ಹಾಕಿ
  • ಅವಲಕ್ಕಿಯ ಮೇಲೆ ಸ್ವಲ್ಪ ನೀರು ಚಿಮುಕಿಸಿ, ನಿಂಬೆ ರಸ ಸೇರಿಸಿ
  • ಚೆನ್ನಾಗಿ ಬೆರೆಸಿ (ನಮ್ಮಲ್ಲಿ ಈ ರೀತಿ ಬೆರೆಸುವುದಕ್ಕೆ - ಮೊರೆಸುವುದು ಎನ್ನುತ್ತೇವೆ) 

ರುಚಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ‍...

 

 

Comments

Submitted by partha1059 Sun, 10/06/2013 - 17:55

ಅಂದರೆ ಇಲ್ಲಿ ಈರುಳ್ಳಿ ಸಹ ಹಸಿಯಾಗಿಯೆ ಇರುತ್ತದೆ ಅಲ್ಲವೆ? ಎಣ್ಣೆಯಲ್ಲಿ ಬಾಡಿಸದೆ.

Submitted by ಗಣೇಶ Mon, 10/07/2013 - 00:38

ಸ್ವಲ್ಪ different ಆಗಿದೆ ಸುಮ ಅವರೆ, ಇನ್ನೂ different ಆದ ಅವಲಕ್ಕಿ ಕತೆ..ನಾವು ಸ್ಕೂಲಲ್ಲಿ ಇದ್ದಾಗದ್ದು..NCC ಮುಗಿದ ಮೇಲೆ ತಿನ್ನಲು ಅವಲಕ್ಕಿ(ಬಜಿಲು) ಸಜ್ಜಿಗೆ ಕೊಡುತ್ತಿದ್ದರು. ನಾವು ಮಾರ್ಚ್‌ಫಾಸ್ಟ್ ಮಾಡುವಾಗಲೂ ಲೆಫ್ಟ್-ರೈಟ್ ಅನ್ನದೇ "ಬಜಿಲ್-ಸಜ್ಜಿಗೆ" ಅನ್ನುತ್ತಿದ್ದೆವು.:) ಅವಲಕ್ಕಿ ಮನೆಯಲ್ಲಿದ್ದರೆ ಅವರು ಲಕ್ಕಿ. ಅಡುಗೆ ಗೊತ್ತಿಲ್ಲದಿದ್ದರೂ ಪರವಾಗಿಲ್ಲ. ಒಂದು ಒಗ್ಗರಣೆಹಾಕಿದರೆ ನಾಸ್ಟಾ ರೆಡಿ! ಅದೂ ಆಗದಿದ್ದರೆ ಅವಲಕ್ಕಿಗೆ ಹಾಲು, ಸಕ್ಕರೆ, ಬಾಳೆಹಣ್ಣು ಹಾಕಿ ತಿನ್ನಬಹುದು. ಮನೆಯಲ್ಲಿ ಪೇಪರ್ ಅವಲಕ್ಕಿ ಸದಾ ಇರಬೇಕು.