ಬೆಂದ ಕಾಳುಗಳು: ಬೇಕ್ಡ್ ಬೀನ್ಸ್
ಬೆಂಗಳೂರಲ್ಲಿ ಬೇಕ್ಡ್ ಬೀನ್ಸ್ ಮಾಡುವುದು ಸುಲಭ ಇಲ್ಲ. ಯಾಕೆಂದರೆ ಅದನ್ನು ಮಾಡಲು ಬೇಕಿರುವ ಕಾಳುಗಳು ನಿಮಗೆ ಸುಲಭದಲ್ಲಿ ಸಿಗೋದಿಲ್ಲ. ಹೀಗಾಗಿ ಬೇಕ್ಡ್ ಬೀನ್ಸ್ ಥರಾ ಮಾಡಲು ನಾನೇ ಕಂಡುಕೊಂಡ ಒಂದು ವಿಧಾನ ಇದು.
ಏನು ಬೇಕು?
ನೆನೆಸಿಟ್ಟ ಕಾಳು (ಹೆಸರು ಕಾಳು, ಕಡಲೇ ಕಾಳು ಅಥವ ಡಬಲ್ ಬೀನ್ಸ್ ಆಗಬಹುದು)
ಉಪ್ಪು, ಮೆಣಸಿನ ಪುಡಿ
ಸಾಸ್ ಮಾಡುವುದಿದ್ದರೆ:
ಟೊಮೆಟೋ (ಕಾಳುಗಳ ಅಳತೆಗೆ ತಕ್ಕಂತೆ)
ಬೆಳ್ಳುಳ್ಳಿ, ನೀರುಳ್ಳಿ
ಒಂದಿಷ್ಟು ಸೋಂಪು
ಮುಂಜಾನೆದ್ದು ಬೇಗನೆ ತಿಂಡಿ ಬೇಕು ಅಂತಾದರೆ ಕಾಳುಗಳನ್ನು ಹಾಗೇ ಕುಕ್ಕರಿನಲ್ಲಿ ಸ್ಟೀಮ್ ಮಾಡಿ ಅಥವ ಇಡ್ಲಿ ಕುಕ್ಕರಿನಲ್ಲಿ ಸ್ಟೀಮ್ ಮಾಡಿ ಅದಕ್ಕೆ ಉಪ್ಪು, ಮೆಣಸು ಹಾಕಿ ತಿಂದುಬಿಡಬಹುದು.
ಪ್ರೋಟೀನ್ಸ್ ಜಾಸ್ತಿ ಇರುವುದರಿಂದ ಇದು ಒಳ್ಳೇದು.
ಕುಕ್ಕರಿನಲ್ಲಿ ಬೇಯಿಸಿದರೆ ತಿನ್ನೋಕಾಗೋದಿಲ್ಲ. ಸ್ಟೀಮ್ ಮಾಡುವುದು ಎಂದರೆ ಹದವಾಗಿ ಹಬೆಯಲ್ಲಿ ಬೇಯಿಸುವುದು. ಕಾಳುಗಳು ತೀರ ಮೆತ್ತಗಾಗಬಾರದು.
ಸಾಸ್ ತಯಾರಿಸುವುದು ತೀರ ಸುಲಭ. ಟೊಮೆಟೋ, ನೀರುಳ್ಳಿ, ಬೆಳ್ಳುಳ್ಳಿ ಮತ್ತು ಸ್ವಲ್ಪಮಾತ್ರ ಸೋಂಪು ಸ್ವಲ್ಪ ಹುರಿದು ಫೈನ್ ಗ್ರೈಂಡ್ ಮಾಡಿಟ್ಟಿಕೊಂಡು ಮತ್ತೆ ಹುರಿದು ಬೇಯಿಸಿದರಾಯಿತು. ಸ್ಟೀಮ್ ಮಾಡಿದ ಕಾಳುಗಳನ್ನು ಸಾಸ್ ಜೊತೆ ಬೆರೆಸಿ ಸ್ವಲ್ಪ ಹೊತ್ತು ಬೇಯಿಸಿದರೆ ಹೊಸ ರೀತಿಯ ಬೇಕ್ಡ್ ಬೀನ್ಸ್ ರೆಡಿ :P