ಭೇಲ್ ಪುರಿ

ಭೇಲ್ ಪುರಿ

ಬೇಕಿರುವ ಸಾಮಗ್ರಿ

ಖಾರಕ್ಕೆ:

ಪುದಿನ ಸೊಪ್ಪು - ೧ ಕಪ್ ನಷ್ಟು

ಕೊತ್ತಂಬರಿ ಸೊಪ್ಪು - ೧ ಕಪ್

ಹಸಿರು ಮೆಣಸು - ೩

ಬೆಳ್ಳುಳ್ಳಿ - ೫/೬ ಎಸಳು

 

ಸಿಹಿಗೆ:

ಹುಣಸೆ ಹುಳಿ

ಬೆಲ್ಲ

(ಸಮ ಪ್ರಮಾಣದ ನೀರಿನಲ್ಲಿ ಎರಡನ್ನು ಬೇರೆ ಬೇರೆ ನೆನೆಸಿಟ್ಟುಕೊಳ್ಳಿ)

 

ಇತರೆ:

ಪುರಿ - ೧೦

ಮಂಡಕ್ಕಿ - ೨ ಕಪ್

ಟೊಮಾಟೊ - ೧ ಕಪ್

ನೀರುಳ್ಳಿ - ೧ ಕಪ್

ಕ್ಯಾರೆಟ್ - ೧ ಕಪ್

ಆಲೂ ಗೆಡ್ಡೆ - ೨

ಹಸಿ ಬಟಾಣಿ - ೧ ಕಪ್

ಒಮ್ ಪುಡಿ 

ತಯಾರಿಸುವ ವಿಧಾನ

೧. ಮೊದಲು ಆಲೂಗೆಡ್ಡೆ ಮತ್ತು ಬಟಾಣಿ ಬೇಯಿಸಿಟ್ಟುಕೊಳ್ಳಿ.

೨. ಖಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ, paste ಮಾಡಿಕೊಳ್ಳಿ.

೩. ಸಮ ಪ್ರಮಾಣದ ಹುಣಸೆ ಹುಳಿ ಹಾಗು ಬೆಲ್ಲ ನೀರನ್ನು, mix ಮಾಡಿ. ಈ ನೀರು ೨ ಕಪ್ ಇದ್ದರೆ, ಅದನ್ನು ೧ ಕಪ್ ಗೆ ಒಲೆಯ ಮೇಲೆ ಕುದಿಸಿ, ಇಳಿಸಿ.

೪. ಒಂದು ದೊಡ್ಡ ಪಾತ್ರೆಯಲ್ಲಿ, ಕ್ಯಾರೆಟ್ ತುರಿ, ಟೊಮಾಟೊ, ನೀರುಳ್ಳಿ ಬೆರೆಸಿ, ಪುರಿ, ಖಾರ (ರುಚಿಗೆ ತಕ್ಕಷ್ಟು), ಸಿಹಿ (ರುಚಿಗೆ ತಕ್ಕಷ್ಟು), ಬೇಯಿಸಿ mash ಮಾಡಿದ ಆಲೂಗೆಡ್ಡೆ, ಬಟಾಣಿ ಸೇರಿಸಿ. ಕೊನೆಗೆ ಮಂಡಕ್ಕಿ ಸೇರಿಸಿ, mix ಮಾಡಿ.

೫. ಬಡಿಸುವ ಮುನ್ನ, ಒಮ್ ಪುಡಿಯನ್ನು ಭೆಲ್ ಪುರಿಯ ಮೇಲೆ ಅಲಂಕರಿಸಿ. ಬೇಕಿದ್ದರೆ, ಕೊತ್ತಂಬರಿ ಸೊಪ್ಪನ್ನೂ ಬಳಸಿ ಅಲಂಕರಿಸಬಹುದು.