ಸಾಬುದಾನ/ಸಾಗು/‍ಸಾಬಕ್ಕಿ ವಡೆ‍

ಸಾಬುದಾನ/ಸಾಗು/‍ಸಾಬಕ್ಕಿ ವಡೆ‍

ಬೇಕಿರುವ ಸಾಮಗ್ರಿ

೨ ಅಳತೆ ಸಾಬುದಾನ/ಸಾಗು/‍ಸಾಬಕ್ಕಿ‍ -  ಮೂರು ಗಂಟೆ ತಣ್ಣೀರಲ್ಲಿ ನೆನೆಯಿಡಿ ಅಥವಾ, ತಯಾರಿಸುವ ಸ್ವಲ್ಪ ಸಮಯದ ಮುಂಚೆ ಬಿಸಿ ನೀರಲ್ಲಿ ನೆನೆಯಿಡಿ‍

‍೧ ಅಳತೆ ಬೇಯಿಸಿ, ಮಾಶ್ ಮಾಡಿದ ಆಲುಗೆಡ್ಡೆ

‍೧/೪ ಅಳತೆ ಚಿರೋಟಿ ರವೆ

‍೨ ಚಮಚ ಅಳತೆ ನಿಂಬೆ ರಸ

‍೨ ಚಮಚ ಅಳತೆ ‍ ಸಕ್ಕರೆ 

‍ಉಪ್ಪು ರುಚಿಗೆ 

‍೧/೪ ಅಳತೆ ಹೆಚ್ಚಿದ ಕೊತ್ತಂಬರಿ ಸೊಪ್ಪು 

‍೪ ಹಸಿರು ಮೆಣಸು/ ಖಾರಕ್ಕೆ ತಕ್ಕಷ್ಟು 

ತಯಾರಿಸುವ ವಿಧಾನ

ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ. 

‍ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ‍ ಖಾದ ನಂತರ, ‍mix ಅನ್ನು ಸ್ವಲ್ಪ‍ ಸ್ವಲ್ಪ‍‍ ತೆಗೆದುಕೊಂಡು, ಕಾಯಿಸಿ. 

‍ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ. 

Comments

Submitted by ಗಣೇಶ Thu, 12/11/2014 - 00:18

ಆಲೂಗಡ್ಡೆ ಜತೆ ಸಾಬಕ್ಕಿ ..ಚಳಿಗೆ  ಚೆನ್ನಾಗಿರುತ್ತದೆ.

>>ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ‍ ಖಾದ ನಂತರ..

ಓದುವಾಗ ಒಂದು ವಾಟ್ಸಪ್ ಜೋಕ್ ನೆನಪಾಯಿತು- ಎರಡು ಲೀಟರ್ ಎಣ್ಣೆಯನ್ನು ಬಾಣಲೆಗೆ ಹಾಕಿ, ಸ್ವಲ್ಪ ಬಿಸಿಮಾಡಿ. ಈಗ ನಿಮ್ಮ ಮೊಬೈಲನ್ನು ಮೊದಲೇ ಸಿದ್ಧಮಾಡಿದ ಉದ್ದಿನ ಹಿಟ್ಟಲ್ಲಿ ಅದ್ದಿ ಈಗ ಕಾದಿರುವ ಎಣ್ಣೆಯಲ್ಲಿ ಹಾಕಿ,ಚೆನ್ನಾಗಿ ಕರಿಯಿರಿ. ಈಗ ನಿಮ್ಮ ಕನಸಿನ "ವೊಡಫೋನ್" ರೆಡಿ. :)