ರಾಗಿ ಹಾಲುಬಾಯಿ (ಮಣ್ಣಿ)
ಬೇಕಿರುವ ಸಾಮಗ್ರಿ
ನೆನೆಸಿದ ರಾಗಿ-೧ಕಪ್,
ಬೆಲ್ಲದ ಪುಡಿ-ಮುಕ್ಕಾಲು ಕಪ್,
ತೆಂಗಿನ ತುರಿ-ಅರ್ಧ ಕಪ್,
ಉಪ್ಪು-ಚಿಟಿಕೆ,
ಏಲಕ್ಕಿ-೩
ತುಪ್ಪ-೨ಚಮಚ
ತಯಾರಿಸುವ ವಿಧಾನ
ನೆನೆಸಿದ ರಾಗಿಗೆ ತೆಂಗಿನ ತುರಿ ಸೇರಿಸಿ ರುಬ್ಬಿ ಸೋಸಿ ಹಾಲು ತೆಗೆಯಿರಿ.ಇದಕ್ಕೆ ಬೆಲ್ಲ,ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ.ತುಪ್ಪ ಏಲಕ್ಕಿಸೇರಿಸಿ. ತಳಬಿಟ್ಟಾಗ ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ.ಆರಿದಮೇಲೆ ಕತ್ತರಿಸಿ. ಮೇಲೆ ತುಪ್ಪ ಹಾಕಿ ಸವಿಯಿರಿ.
(ಡಯಟ್ ನಲ್ಲಿರುವವರು ತುಪ್ಪ ಮತ್ತು ಕಾಯಿತುರಿ ಹಾಕದೆ ಮಾಡಬಹುದು.)
ಅರ್ಧ ಕಪ್ ನೆನೆಸಿದ ರಾಗಿ ಮತ್ತು ಅರ್ಧ ಕಪ್ ನೆನೆಸಿದ ಗೋಧಿ ಸೇರಿಸಿ ಕೂಡಾ ಹಾಲುಬಾಯಿ ಮಾಡಬಹುದು.ಮಾಡುವ ವಿಧಾನ ಮೇಲಿನಂತೆ.
ಹಾಲುಬಾಯಿಯನ್ನು ಜೋನಿಬೆಲ್ಲದಲ್ಲಿ ಮಾಡಿದರೆ ತುಂಬಾ ರುಚಿಯಾಗಿರುತ್ತದೆ.
ಜೋನಿಬೆಲ್ಲ -ಮಲೆನಾಡಿನ ಕಬ್ಬಿನ ಆಲೆಮನೆಗಳಲ್ಲಿ ತಯಾರಿಸುವ ಪರಿಶುದ್ಧವಾದ ಡಬ್ಬಿಬೆಲ್ಲ.