"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !

"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !

ಬರಹ

ಅಮೆರಿಕದ ಅಧ್ಯಕ್ಷರ ಕನಸಿನ ಮನೆಯಾದ, ಶ್ವೇತ ಭವನವನ್ನು ತನ್ನ ಅಪಾರ ಜನಪ್ರಿಯತೆ, ಹಾಗೂ ಮಾತಿನಮೋಡಿ ಹಾಗೂ ಸವಿನಯ ನಡವಳಿಕೆಗಳಿಂದ ಮುಂದಿನ ೪ ವರ್ಷಗಳಕಾಲ, ಪ್ರೀತಿಯ ಮನೆಯನ್ನಾಗಿಸಿಕೊಂಡ ಶ್ಲಾಮಲಸುಂದರನ ಚೊಚ್ಚಲ ಭಾಷಣವನ್ನು, ವಿಶ್ವದ ಜನತೆ ಎವೆಯಕ್ಕದ ಕಣ್ಣುಗಳಿಂದ ವೀಕ್ಷಿಸುತ್ತಿದ್ದ ದೃಷ್ಯ ಹೃದಯಂಗಮವಾಗಿತ್ತು. ’ಒಹ್ ನೀರಿನಂತೆ ಹರಿಯುವ ವಾಗ್ಝರಿ ’ ! ಯಾವ ಬಿಳಿಯನಿಗೂ ಕಡಿಮೆಯಿಲ್ಲದ ಅಸಮಾನ್ಯ ವಿಚಾರಧಾರೆ ! ಅಮೆರಿಕದ ಎಳೆಯರನ್ನು ಹೊಡೆದೆಬ್ಬಿಸಿ ಹುಚ್ಚರನ್ನಾಗಿಸಿದ, ಅವರ ಮಾತಿನ ಮೋಡಿಯನ್ನು ನೋಡಿ, ಅದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅನುಭವಿಸಿದವರೆಲ್ಲಾ ಒಕ್ಕೊರಲಿನಿಂದ ಕೂಗುವ ಪರಿ... ’ಓಬಾಮ, ಓಬಾಮ, ಓಬಾಮ ಓಬಾಮ...! ಈ ಸಂತಸದ ಕೂಗು ವಾಷಿಂಗ್ಟನ್ ನ ನಗರದ ಮುಗಿಲನ್ನೆಲ್ಲಾ ಆವರಿಸಿದ ಚಾರಿತ್ರ್ಯಿಕ ದಿನ- ೨೦, ಜನವರಿ, ೨೦೦೯ !

ಮಾರ್ಟಿನ್ ಲೂಥರ್ ಕಿಂಗ್ ರವರ ಕನಸು ನನಸಾಗಿದೆ ! ಭಾಷಣವನ್ನು ಮುದ್ದಾಂ ಆಲಿಸಲು ಮತ್ತು ಪ್ರತಿಜ್ಞಾವಿಧಿಯನ್ನು ಕಣ್ಣಾರೆ ಕಾಣಲು ಅಮೆರಿಕಾದ ಉದ್ದಗಲದಿಂದ ಮಂಗಳವಾರ ಸಂಜೆ ಲಕ್ಷಾಂತರ ಜನ ಜಮಾಯಿಸಿದ್ದರು. ಇದುವರೆಗೆ ಇದ್ದ ದಾಖಲೆ ಎಂದರೆ ಇ. ಜಾನ್ಸ್ ನ್ ಅಧಿಕಾರ ಸ್ವೀಕರಿಸಿದ ವರ್ಷದಲ್ಲಿ ೧೨ ಲಕ್ಷ ಜನ ಬಂದಿದ್ದೇ ದೊಡ್ಡದಾಗಿತ್ತು. ಒಂದು ವರದಿ ಪ್ರಕಾರ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಹರಿದು ಬಂದ ಜನಸಾಗರ ೨೦ ಲಕ್ಷಕ್ಕೂ ಜಾಸ್ತಿ ಇತ್ತಂತೆ.

ಮಂಗಳವಾರ ಸಂಜೆ ಕೊರೆಯುವ ಚಳಿಯಲ್ಲಿ ಅಮೆರಿಕಾದ ರಾಜಧಾನಿ ಭಾರತದೋಪಾದಿಯಲ್ಲಿ ಕಾಣುತ್ತಿತ್ತು. ಏಕೆಂದರೆ, ಫಿಲಡಲ್ಫಿಯಾದಿಂದ ಸ್ಯಾನ್ ಡಿಯಾಗೋ ತನಕ, ಎಲ್ಲಿಂದ ಎಲ್ಲಿಯವರೆಗೆ ಕಣ್ಣು ಹಾಯಿಸಿದರೂ, ಜನ ಜನ ಜನ ಮತ್ತು ಜನಸಮುದ್ರ ! "ಈ ಮಟ್ಟದ ಭಾರಿ ಜನಸಂದಣಿಯನ್ನು ಕಂಡ ಅಧ್ಯಕ್ಷ ಪದವಿಗ್ರಹಣದ ಮೊದಲ ಸಮಾರಂಭವಿದು," ಎಂಬ ಕೀರ್ತಿಗೆ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್ ಪಾತ್ರವಾಯಿತು.

ಜಗತ್ತಿನಾದ್ಯಂತ ಇನ್ನುಳಿದ ಜನ, ಈ ಕಾರ್ಯಕ್ರಮವನ್ನು ತಮ್ಮ ತಮ್ಮ ಬಣ್ಣದ ಹಾಗೂ ಕಪ್ಪು ಬಿಳುಪಿನ ಟಿವಿ ಸೆಟ್ಟುಗಳಲ್ಲಿ ನೋಡಿದರು. ಅಮೆರಿಕಾದ ಜನತಾಂತ್ರಿಕ ವ್ಯವಸ್ಥೆ, ಕಾರ್ಯಕ್ರಮ ವ್ಯವಸ್ಥೆಗೊಳಿಸುವ ವ್ಯವಸ್ಥೆ, ಸಾಮೂಹಿಕ ಹಾಗೂ ವ್ಯಕ್ತಿ ಶಿಸ್ತು ಪ್ರದರ್ಶನ ಕಂಡು ವಿಶ್ವ ದ ಜನರೆಲ್ಲಾ ಬೆರಗಾದರು.

ಪ್ರತಿಜ್ಞಾ ವಿಧಿ ಬೋಧಿಸಿಕೊಂಡ ಕೂಡಲೇ ಬರಾಕ್ ಒಬಾಮ, ಮಾಜಿ ಅಧ್ಯಕ್ಷ ಬುಷ್ ಬಳಿ ಹೋಗಿ ಮಾತನಾಡಿ, ತಮ್ಮ ಧನ್ಯವಾದಗಳನ್ನು ಸಲ್ಲಿಸಿದರು.

ಆನಂತರ ಜಾರ್ಜ್ ಡಬ್ಲ್ಯೂ ಬುಷ್ ಅವರು ಅಧಿಕಾರವನ್ನು ಹಸ್ತಾಂತರ ಮಾಡುವ ಔಪಚಾರಿಕ ವಿಧಿಗಳನ್ನು ವಿದ್ಯುಕ್ತವಾಗಿ ಪೂರೈಸಿದರು. ಶ್ವೇತಭವನದ ಸಮಸ್ತ ಕಾರ್ಯಾಚರೆಗಳಿಗೆ ಇಂದಿನಿಂದ ’ನೀವೇ ಪೂರ್ಣಾಧಿಕಾರಿಗಳೆಂದ ಹೇಳುವಾಗ ಬುಷ್ ಗದ್ಗತಿತರಾಗಿದ್ದರು” " It's all yours now - good luck." ಎಂದರು.

ಈ ಭಾಷಣದಲ್ಲಿ ಹಳೆಯ ಭಾಷಣದ ಪುನರುಕ್ತಿಗಳು ಇರದ, ಅತ್ಯಂತಪ್ರತಿಭೆಯಿಂದ ಕೂಡಿದ ಮತ್ತು ಸ್ಫೂರ್ತಿಭರಿತ ಭಾಷಣವನ್ನು ನಿರರ್ಗಳವಾಗಿ ಹರಿಸುವ ಒಬಾಮರ ಮೊದಲ ಭಾಷಣದ ವಿಶೇಷಣವೆಂದರೆ ಅಲ್ಲಿ, ಬುಷ್ ಕೂಡ ಚಪ್ಪಾಳೆಬಾರಿಸಿ, ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು.

ಲಕ್ಷಾಂತರ ಜನ ತಮ್ಮ ತಂದೆಯವರ ಭಾಷಣವನ್ನು ಕೇಳುತ್ತಾ ವೀಕ್ಷಿಸಿದ ರೀತಿ ಅವರ ಮಕ್ಕಳಿಗೆ ಹಾಗೂ ಮುದತಂದಿತ್ತು. ಒಬಾಮನ ಮೊದಲ ಮಗಳು ಸಾಶಾ, - dad: "That was a good speech, perfect." ಎಂದು ಹೇಳಿದಳೆಂದು ತುಟಿಚಲನವಲನ ತಜ್ಞರ ವಿಶ್ಲೇಷಣೆಯಿಂದ ನಮಗೂ ಅನ್ನಿಸಿದ ಅತ್ಯಂತ ರೋಮಾಂಚಕ ಸನ್ನಿವೇಷವಾಗಿತ್ತು-ಆ ಮರಯಲಾರದ ೨೦೦೯ ರ ಜನವರಿಯ, ೨೦ ಮಧ್ಯಾನ್ಹ !