ಅಪರೂಪದ ಗಾದೆ ಮಾತುಗಳು
ಬರಹ
ಈಜು ಮರೀಬೇಡ, ಜೂಜು ಕಲೀಬೇಡ .
ಇಬ್ಬರಲ್ಲಿ ಗುಟ್ಟು , ಮೂವರಲ್ಲಿ ರಟ್ಟು.
ಇರುವೆಗೆ ರೆಕ್ಕೆ ಬರುವದು , ದೀಪದಲ್ಲಿ ಬಿದ್ದು ಸಾಯಲಿಕ್ಕೇ .
ಇರೋದು ಕಳೆಯೋದು ಸುಲಭ , ಇಲ್ಲದ್ದು ಕೂಡಿಸೋದು ಕಷ್ಟ .
ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ?
ಬಿಸಿ ಹಾಲಿಗೆ ಬಾಯ್ಸುಟ್ಟುಕೊಂಡು ಮಜ್ಜಿಗೆಯನ್ನು ಊದಿ ಊದಿ ಕುಡಿದರಂತೆ.
ಬೀಜ ಸಣ್ಣದಾದರೆ ಮರ ಸಣ್ಣದೋ?
ಬೀದಿಯ ಕೂಸು ಬೆಳೆಯಿತು ; ಕೋಣೆಯ ಕೂಸು ಕೊಳೆಯಿತು.
ಬೆಕ್ಕಿಗೆ ಬೆಣ್ಣೆ ಕಂಡಿತು ; ಬಡಿಗೆ ಕಾಣಲಿಲ್ಲ.
ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಮುಗಿದರು.
ಹೆತ್ತವಳಿಗೆ ಗೊತ್ತು ಹೆರಿಗೆ ಬೇನೆ.
ಮಜ್ಜಿಗೆಗೆ ತಕ್ಕ ರಾಮಾಯಣ.