ಆಶಾ ಕಿರಣ

ಆಶಾ ಕಿರಣ

ಬರಹ

ಏನೆಂದು ಹೇಳಲಿ ಈ ಬದುಕಿನ ಬವಣೆಯ


ಸಾವಿರಾರು ಕನಸುಗಳಿದ್ದವು ಮನದಲ್ಲಿ


ಏನೇನೋ ಸಾಧಿಸುವೆನೆಂಬ ಛಲವಿತ್ತು


ಏಲ್ಲರನ್ನೂ ಎಲ್ಲವನ್ನೂ ಹಿಂದಿಕ್ಕುವೆನೆಂಬ  ಬಲವಿತ್ತು


ಬಣ್ಣಬಣ್ಣದ ಕನಸುಗಳ ತುಂಬಿದ ಮನಸಿತ್ತು


ಎಂದೆನಗೆ ವಾಸ್ತವದರಿವಾಯಿತೋ


ಈ ಲೋಕ ವಿಕಾರಗಳರಿವಾಯಿತೋ 


ಎಲ್ಲಾ ಕನಸುಗಳು ಕಡಲ ತೀರದ ಮರಳ ಗೋಪುರದಂತೆ ಚೂರುಚೂರಾಯಿತು


 


ಪುನಃ ಚೂರುಚೂರಾದ ಕನಸುಗಳ ಸೇರಿಸಲು ಪ್ರಯತ್ನಿಸಿದೆ 


ಅದು ಪೂರ್ಣವಾಗುವ ಮೊದಲೇ


ಸಮುದ್ರದ ಅಲೆಯೊಂದು ಬಂದು  


ಅದನ್ನು ತನ್ನೊಡಲೊಳಗೆ ಸೇರಿಸುತ್ತಿತ್ತು


 



ಈಗ ಕನಸುಗಳು ಕಮರುತ್ತಿವೆ, ಛಲವೂ ಕುಂದುತ್ತಿದೆ


ಕಾಯುತಿರುವೆನು ಆಶಾ ಕಿರಣದ ಪ್ರತೀಕ್ಷೆಯಲಿ


ಆ ಸಮುದ್ರದ ಅಲೆಗಳ ತಡೆಯಲು


ಆನನ್ನ ಕನಸಿನ ಗೋಪುರವ ಪೂರ್ಣಗೊಳಿಸಲು


ಯಾರಾದರೂ ಬರುವರೋ ಎಂದು  ......