ಆಸೆ ‍‍‍~ ನಶೆ

ಆಸೆ ‍‍‍~ ನಶೆ

ಕವನ

ಆಸೆಯಾ ನಶೆಯದು
ಮಧುಪಾನದಂತೆ,
ಸೆರೆ ಸೆರೆಯ ಹೀರಿದರೂ,
ಉದರ ತುಂಬದಂತೆ.

ನಶೆಯ ಮತ್ತಲಿ
ನುಡಿವ ಮಾತದು ಹಗುರ,
ದುರಾಸೆಯ ಚಿತ್ತವು
ನಡೆವ ಹಾದಿಯು ಬರ್ಬರ.

ಮಧುಪಾನ ನಶೆಯಿಂದ
ಉದರ ಪದರವು ತೂತು
ದುರಾಸೆಯು ಮನತುಂಬೆ,
ಬದುಕೆ ಹಾದರವು, ಜೀವ ತಾ ಸೋತು.

ಮಧು ನಶೆಯೆ ಬಿಡಿಸಲದು
ಮದ್ದುಂಟು ಔಷಧಿಯ,
ಮನದಾಸೆ ನಶೆ ಬಿಡಿಸೆ,
ಪ್ರಬುದ್ದನಡೆ ಔಷಧಿಯು.

 

Comments