ಉಗಾದಿ -೨೦೦೫
ಬರಹ
ಅತ್ತ ವ್ಯಾಟಿಕನ್ ಸುದ್ದಿ!
ಇತ್ತ ವ್ಯಾಟ್ ಸುದ್ದಿ!!
ಈ ನಡುವೆ ಅಲ್ಲಲ್ಲಿ
ನೆಲ ನಡುಕ, ಜಲ ಪ್ರಳಯ!
ನೆಲವೂ ಸುರಕ್ಷಿತವಲ್ಲ!
ಜಲವೂ ಸಲಹುದಿಲ್ಲ!!
ದೇವನೊಬ್ಬನಿದ್ದಾನೆಂದರೆ
ಆತನ ಧೂತರೂ ನಮ್ಮನ್ನು
ನಡುಗಡ್ಡೆಯಲಿ ನಿಲ್ಲಿಸಿ
ದೈವಾಧೀನರಾದರು
ಅಲ್ಲೆಲ್ಲ 'ಅಂತಿಮ ಯಾತ್ರೆ....'
ಇಲ್ಲಿ ಅಶಾಂತಿಯ ಮಧ್ಯೆ 'ಬಸ್' ನ 'ಶಾಂತಿಯ ಯಾತ್ರೆ..'
ಈ ಮಧ್ಯೆ ಅಂದೆಂದೋ ಕೈಗೊಂಡ
'ದಂಡೀಯಾತ್ರೆ' ಯ ಮರು ಆಚರಣೆ!
ಇದೆಲ್ಲದರ ಗೊಡವೆ ಬೇಡ
ನಾವು ನಾವಾಗಿರೋಣಾ ಎಂದರೆ...
ಈ 'ದೇಹ' ದ ತುಂಬಾ ನೋವು...
ನೋವಿನ ಆಗರ.
ಹೇಳಲುಬಾರದು.. ಅನುಭವಿಸಲಾಗದು...
ಆದರೂ ಬದುಕಬೇಕು
ಈ 'ಎಲ್ಲ' ದರ
ಎಲ್ಲಾ 'ಧರ' ಗಳ ನಡುವೆ ಬಾಳಿ...
ಏನಾದರೂ ಸಾಧಿಸಬೇಕು...
ಸಾಧುವಾಗಬೇಕು...
ಸಜ್ಜನರೊಂದಿಗೆ ಸೇರಿ
ಬೆಲ್ಲವಾಗಬೇಕು...
ಬೇವು ಮೆದ್ದು 'ಮಧು ಮೇಹ'ಕೆ ಕಡಿವಾಣ ಹಾಕಬೇಕು!
ಸಂಕೇತ್ ಗುರುದತ್ತ