-ಎರಡು(ಕಣ್ಣ)ಹನಿಗಳು-

-ಎರಡು(ಕಣ್ಣ)ಹನಿಗಳು-

ಕವನ

 

-1-
ಪ್ರಿಯ,
ನಿನಗೆ ನನ್ನನ್ನೇ 
ಹಾಸಲು ಮತ್ತು 
ಹೊದೆಯಲು  ಕೊಟ್ಟಿದ್ದರೆ 
ನೀ ನನ್ನ 
ಒದೆಯಲೂ ಉಪಯೋಗಿಸಿದ್ದು 
ನನ್ನ ದುರದೃಷ್ಟ 
-ಮಾಲು 
******************
-2- 
ನಾನು ಇವನು ಇರುವ 
ಊರಿನಲ್ಲಿ 
ಕುಡಿವ ನೀರಿಗೂ ಬರವಿದೆ 
ಆದರೆ...
ನಾನು ತವರ ನೆನೆಸಿದರೆ 
ಕೈ ತೊಳೆಯಲೂ 
ನನ್ನ ಕಣ್ಣಲ್ಲಿ 
ನೀರಿದೆ
-ಮಾಲು