ಎರಡು ಕವಿತೆಗಳು

ಎರಡು ಕವಿತೆಗಳು

ಕವನ

ತಂಪೆನುವ ನಾಡಿನಲಿ...

ತಂಪೆನುವ ನಾಡಿನಲಿ

ಎಲ್ಲೆಲ್ಲೂ ರಕುತವೆ

ಬೂದುಗುಂಬಳ ಕಾಯ ಒಳಗು ಕೆಂಪೆ

ಹಣ್ಣುಗಳ ಒಳಗೆಲ್ಲ

ಸಿಡಿಮದ್ದಿನಾ ಸದ್ದು

ಪ್ರಾಣಿ ಕುಲಕೆ ಮೃತ್ಯು ಹುಡುಕಿ ಬಂತೆ

 

ವಂಚಕರ ಕೈ ಚಳಕ

ವಂಚಿಸುತ ದಿನ ದಿನವು

ದಯೆ ಕರುಣೆ ನಿಷ್ಕೃೀಯ ತತ್ವವಾಯ್ತೆ

ಒಡಲಲ್ಲಿ ನವ ಜೀವ

ಹೊತ್ತ ಖುಷಿಯಲಿ ಇತ್ತೋ

ತಿನುವ ಆಸೆಗೆ ತಾನೇ ಬಲಿಯು ಆಯ್ತೆ

 

ದೇವತೆಗಳಾ ಸ್ವರ್ಗ

ಭೂಮಿ ಎನ್ನುವರಿಂದು

ಮನುಷತ್ವ ಸತ್ತಿರುವ ನೋವ ಕತೆಯೆ

ಮನು ಕುಲದ ಮೋಡಿಯೊಳು

ಇನ್ನೇನು ಆಗುವುದೊ

ಕಾಲ ಬಂತೇಯಿಂದು ದುಷ್ಟ ಸಂಹಾರಕೆ

***

ಓಡುವವರು

ಇಂದಿನಾ ಹೊಸಬರು

ಕಲಿಕೆಯಲಿ ಮುಂದು

ಅದಕ್ಕೆಂದು ತೋರುತ್ತದೆ

ಓಡುವುದರಲ್ಲೂ ಮುಂದು

ಮನೆಯ ಹಿರಿಯರ ಮಾತ

ಕೇಳದಾದರು ಇಂದು

ಕಲಿತಿಲ್ಲವೇ ನಾವು

ಅವರಿಗಿಂತಲೂ ಮುಂದು !

ಯಾವುದು ಕೆಟ್ಟದ್ದು

ಒಳ್ಳೆಯದು ಗೊತ್ತಿಲ್ಲ 

ಪ್ಯಾಷನ್ ಯುಗದಲ್ಲಿ

ಎಲ್ಲವನು ಮರೆತಿಹರು

ಕೈಹಿಡಿದ ಚೋರನನೆ

ನಂಬಿ ಹೋಗಿರಿಂದು !

ಜಾತಿಯಿರದಿಹ ನೆಲವು

ಎಲ್ಲೆಲ್ಲು ತುಂಬಿರಲು

ಓದಿರುವ ತಲೆಗದುವೆ

ಅಮೃತವ ತುಂಬಿರಲು

ಒಳ್ಳೆಯವನೆ ಕೆಟ್ಟವನೆ

ಒಂದನ್ನೂ ಯೋಚಿಸದೆ

ದಿಕ್ಕರಿಸಿ ಮನೆಯವರನು

ಓಡುವರು ಮುಂದೆ !

ಇದ ನೋಡಿ ದಿಕ್ಕೆಟ್ಟು

ಓಡುವರು,

ಹಿರಿಯರೂ ಹಿಂದೆ !!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್