ಐಕ್ಯ ಗಾನ ಮೊಳಗಲಿ

ಐಕ್ಯ ಗಾನ ಮೊಳಗಲಿ

ಕವನ

ದೇಶದ ಗುಡಿಯ ಮೇಲ್ಗಡೆ ಹಾರಿಸಿ

ರಾಷ್ಟ್ರದ ಧ್ವಜವನು - ಓ ಜನರೆ

ತಾಯಿಯ ಕರುಳಿನ ಕುಡಿಗಳು ನಾವು

ಎನುತಲಿ ಬಾಳಿರಿ - ಓ ಜನರೆ

 

ಸತ್ಯದ ನೆಲೆಯಲಿ ಶಾಂತಿಯ ಬದುಕಲಿ

ತ್ಯಾಗವ ಮಾಡಿರಿ - ಓ ಜನರೆ

ಭೇದವ ತೊರೆಯುತ ಐಕ್ಯದ ಗಾನದಿ

ಮುಂದಕೆ ನಡೆಯಿರಿ - ಓ ಜನರೆ

 

ಛಲವನು ಮುರಿಯದೆ ಸಾಹಸದಿಂದಲಿ

ಗುರಿಯನು ಮುಟ್ಟಿರಿ - ಓ ಜನರೆ

ಕಷ್ಟವು ಬಂದರು ನಷ್ಟವು ಬಂದರು

ಭಕ್ತಿಯ ಬಿಡದಿರಿ - ಓ ಜನರೆ

 

ಹಿರಿಯರ ನುಡಿಯನು ನಡತೆಯ ಗುಣವನು

ತುಂಬುತ ಸಾಗಿರಿ - ಓ ಜನರೆ

ಶಾಂತಿಯ ಬದುಕಲಿ ತತ್ವವ ಸಾರುತ

ಸೇವೆಯ ಗೈಯಿರಿ - ಓ ಜನರೆ

 

ಅಂಜದೆ ಅಳುಕದೆ ನಿಷ್ಠೆಯ ತೋರುತ

ದೇಶವ ಕಟ್ಟಿರಿ - ಓ ಜನರೆ

ದೇಶದ ಗುಡಿಯ ಮೇಲ್ಗಡೆ ಹಾರಿಸಿ

ರಾಷ್ಟ್ರದ ಧ್ವಜವನು - ಓ ಜನರೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್