ಒಂಟಿ ಗಝಲ್
ಕವನ
ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ
ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ ಸರಿಯಾಗಿದೆ ಗೆಳತಿ
ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಏಕೆ
ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ
ಮಾಣಿಕ್ಯ ವಜ್ರದೊಳು ಯೌವನವು ಹೊಳೆವ ನಕ್ಷತ್ರವು
ಹೃದಯ ಭಾಷೆಯ ನಡುವೆ ಮಲ್ಲೆ ಜೊತೆಯಾಗಿದೆ ಗೆಳತಿ
ಬದುಕೊಂದು ಪ್ರೇಮ ಗಂಗೆ ಹರಿಯುತಿಹಳೂ ನೋಡು
ಒಲವಿನಲಿ ಬಂದಿರುವ ಜಲಧಾರೆ ಪ್ರೀತಿಯಾಗಿದೆ ಗೆಳತಿ
ಹರುಷದಿಂದಲೆ ಬೆರೆಯು ಯಾವತ್ತೂ ಮನದೊಳಗೆ ಈಶಾ
ಮುಕುಟ ಮಣಿಯ ನಡುವೆಯೆ ಜವ್ವನ ಸವಿಯಾಗಿದೆ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
