ಕನ್ನಡ ಪತ್ರಿಕಾ ಲೋಕ (ಭಾಗ ೧೮೯) - ಕೋಸ್ಟಲ್ ನ್ಯೂಸ್ & ಆ್ಯಡ್ಸ್
ಉಡುಪಿಯ "ಕೋಸ್ಟಲ್ ನ್ಯೂಸ್ & ಆ್ಯಡ್ಸ್"
ಉಡುಪಿಯಿಂದ ಪ್ರಕಟವಾಗುತ್ತಿದ್ದ ಉಡುಪಿ ತಾಲೂಕಿಗೆ ಸೀಮಿತವಾಗಿದ್ದ ಒಂದು ಮಾಸಪತ್ರಿಕೆಯಾಗಿತ್ತು "ಕೋಸ್ಟಲ್ ನ್ಯೂಸ್ & ಆ್ಯಡ್ಸ್". 2000ನೇ ಇಸವಿಯಲ್ಲಿ ಆರಂಭವಾದ ಕೋಸ್ಟಲ್ ನ್ಯೂಸ್, ಕೆಲವು ವರ್ಷಗಳ ಕಾಲ ನಡೆದು ನಂತರ ಸ್ಥಗಿತಗೊಂಡಿತು.
ಟ್ಯಾಬ್ಲಾಯ್ಡ್ ರೂಪದಲ್ಲಿದ್ದ ನಾಲ್ಕು ಪುಟಗಳ ಪತ್ರಿಕೆಯನ್ನು ಅಂಗಡಿಗಳಿಗೆ, ಕಚೇರಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿತ್ತು. ಜಾಹೀರಾತುಗಳನ್ನು ಸಂಗ್ರಹಿಸಿ, ನಂಬಿಕೊಂಡೇ ಪತ್ರಿಕೆಯನ್ನು ನಡೆಸಲಾಗುತ್ತಿತ್ತು. ಕುಂಜಿಬೆಟ್ಟು ರಾಧಾ ಕಾಂಪ್ಲೆಕ್ಸ್ ನಲ್ಲಿ ಪತ್ರಿಕಾ ಕಚೇರಿ ಇತ್ತು. ಪ್ರವೀಣ್ ಪ್ರಭಾಕರ್ ಮಾಲಕರಾಗಿದ್ದರು. ಪ್ರಕಾಶಕರು ಮತ್ತು ಸಂಪಾದಕರು ಕಿಣಿ ಉಡುಪಿ (ಜಯಪ್ರಕಾಶ್ ಕಿಣಿ) ಅವರಾಗಿದ್ದರು. ಟೈಪಿಂಗ್ ಮತ್ತು ಡಿಸೈನ್ ಕೆಲಸಗಳು ಕೋಸ್ಟಲ್ ಗ್ರಾಫಿಕ್ಸ್ ನಲ್ಲಿ ನಡೆಯುತ್ತಿದ್ದರೆ, ಮಂಗಳೂರಿನ ಗುರುಪ್ರಸಾದ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು.
~ ಶ್ರೀರಾಮ ದಿವಾಣ