ಕಾನ್ತನಿಲ್ಲದ ಮ್ಯಾಲೆ ಏಕಾನ್ತವ್ಯಾತಕೆ
ಬರಹ
ರಚನೆ: ಚಂದ್ರಶೇಖರ ಕಂಬಾರ
ಕಾನ್ತನಿಲ್ಲದ ಮ್ಯಾಲೆ ಏಕಾನ್ತವ್ಯಾತಕೆ
ಗಂಧಲೆ ಬನವ್ಯಾತಕೆ ಈ ದೇಹಕೆ
ಮಂದ ಮಾರುತ ಮೈಗೆ ಬಿಸಿಯಾಗದೆ ತಾಯೀ
ಬೆಳುದಿಂಗಳು ಉರಿವ ಬಿಸಿಲಾಯಿತೆ ಧರೆಗೆ
ಹೂಜಜಿ ಸೂಜಿಯ ಹಾಗೆ ಚುಚ್ಚುತಲಿವೆ
ಉರಿಗಳು ಮೂಡ್ಯಾವು ನಿಡಿಸುಯ್ಲಿನೊಳಗೆ
ಉಸಿರಿನ ಬಿಸಿಯವಗೆ ತಾಗದೆ ಹುಸಿ ಹೋಯ್ತೆ
ಚೆಲುವ ಬಾರದಿರೆನು ಫಲವೆ ಈ ಚೆಲುವಿಗೆ
ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆನ
ಆಪ್ತಳಿಗೆ ಆಶ್ರಯವಿರದೆ ಒದ್ದಾಡುವೆ
ಅನ್ಯಪುರುಷನು ಮಾರ ಅನ್ಗನೆಯನೆಳೆದಾರೆ
ಕೈಹಿಡಿದ ಸರಿಪುರುಶ ಸುಮ್ಮನಿರತಾರನೆ
ಕರುಣೆಯ ತೋರುವರ್ಯಾರೆ ಸಣ್ಣವಳಿಗೆ