ಗಝಲ್ ಮತ್ತು ಸಂದೇಶ

ಗಝಲ್ ಮತ್ತು ಸಂದೇಶ

ಕವನ

ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು

ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು

 

ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ

ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು

 

ಕನಸುಗಳೇ ಬಾಳಿನಲಿ ಬೀಳದೆ ಸವಿಯನ್ನು ಉಣ್ಣುವುದೆ ಬೇಡವೆ ಹೇಳಿಂದು

ಭಯದೊಳಗಿನ ಶೀತಲ ಗೋರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು

 

ಅಸತ್ಯಗಳ ನಡುವೆಯೇ ಸತ್ಯಗಳು ಮರಣ ಹೊಂದಿವೆಯೋ ನೋಡು ಬಾರೆ

ದಾರಿಯೊಳಗಿನ ನಿರ್ಮಲ ಕೇರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು

 

ಅಗೋಚರಗಳ ನಡುವೆಯೆ ಹೊರಟಿರುವನು ನಗುವೇ ಇಲ್ಲದ ಸರದಾರ ಈಶಾ

ಗೋಚರದೊಳಗಿನ ಅಮಲಿನ ಭಾವನೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು

***

ಸಂದೇಶ

ಭಾರತ ದೇಶವು ಚಂದ

ಎಲ್ಲೆಲ್ಲೂ ಅಂದವೇ ಆನಂದ

 

ನೋಡದೋ ಜಮ್ಮು ಕಾಶ್ಮೀರಾ

ಸುಂದರ ಸೊಬಗಿನ ತಾಣ 

ಇಲ್ಲದೋ ಕನ್ಯಾಕುಮಾರಿ

ಭೂಶಿರ ನವ ಯುಗ ಸಂಸ್ಥಾನ

 

ಗಂಗಾ ಯಮುನ ಕಾವೇರಿ

ನೇತ್ರಾವತಿ ನದಿಗಳ ಬೀಡು

ಸಸ್ಯ ಫಲ ಸಮೃದ್ಧ ಇಹುದು

ಜೀವನ ಸುಖಮಯ ಸಾಗರ

 

ನೋಡದೊ ಜೋಗ ಜಲಪಾತ

ಸುಂದರ ತಾಣ ಸಂದೇಶ 

ಇಲ್ಲದೋ ಧರ್ಮಸ್ಥಳ ನೆಲೆಯು

ದಾನ ಧರ್ಮಗಳ ತವರೂರು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್