ಗೀತಾಮೃತ - 45

ಗೀತಾಮೃತ - 45

*ಅಧ್ಯಾಯ ೧೧*

     *ಅರ್ಜುನ ಉವಾಚ*

*ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ/*

*ಇದಾನೀಮಸ್ಮಿ ಸಂವೃತ್ತ: ಸಚೇತಾ: ಪ್ರಕೃತಿಂ ಗತ://೫೧//*

ಅರ್ಜುನನು ಹೇಳಿದನು _ ಹೇ ಜನಾರ್ದನಾ! ನಿನ್ನ ಈ ಅತಿಶಾಂತವಾದ ಮನುಷ್ಯರೂಪವನ್ನು ನೋಡಿ ಈಗ ನಾನು ಸ್ಥಿರಚಿತ್ತನಾಗಿದ್ದೇನೆ ಮತ್ತು ನನ್ನ ಸ್ವಾಭಾವಿಕವಾದ ಸ್ಥಿತಿಯನ್ನು ಪಡೆದಿದ್ದೇನೆ.

    *ಶ್ರೀ ಭಗವಾನುವಾಚ*

*ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ/* 

*ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣ://೫೨//*

    ಭಗವಂತನು ಹೇಳಿದನು _

  ನನ್ನ ಯಾವ ಚತುರ್ಭುಜ ರೂಪವನ್ನು ನೀನು ನೋಡಿದ್ದೀಯೋ ಇದರ ದರ್ಶನವು ತುಂಬಾ ದುರ್ಲಭವಾಗಿದೆ.ದೇವತೆಗಳು ಸಹ ಸದಾ ಈ ರೂಪದ ದರ್ಶನದ ಆಕಾಂಕ್ಷೆಯನ್ನು ಮಾಡುತ್ತಿರುತ್ತಾರೆ.

***

 *ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ/*

*ಶಕ್ಯ ಏವಂ ವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ//೫೩//*     ಯಾವ ಪ್ರಕಾರವಾಗಿ ನೀನು ನನ್ನನ್ನು ನೋಡಿದ್ದೀಯೋ ಈ ಪ್ರಕಾರ ಚತುರ್ಭುಜರೂಪನಾದ ನನ್ನನ್ನು ವೇದಗಳಿಂದ,ತಪಸ್ಸಿನಿಂದ,ದಾನದಿಂದ ಮತ್ತು ಯಜ್ಞದಿಂದಲೂ ನೋಡಲಾಗುವುದಿಲ್ಲ.

*ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂ ವಿಧೋರ್ಜುನ/*

*ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ//೫೪//*

ಆದರೆ ಹೇ ಪರಂತಪ ಅರ್ಜುನಾ! ಅನನ್ಯ ಭಕ್ತಿಯ ಮೂಲಕ ಈ ಪ್ರಕಾರವಾದ ಚತುರ್ಭುಜರೂಪವುಳ್ಳ ನಾನು ಪ್ರತ್ಯಕ್ಷವಾಗಿ ನೋಡಲು,ತತ್ವದಿಂದ ತಿಳಿಯಲು ಹಾಗೂ ಪ್ರವೇಶಿಸಲು ಅರ್ಥಾತ್ ಏಕೀಭಾವದಿಂದ ಪ್ರಾಪ್ತವಾಗುವುದಕ್ಕೂ ಸಹ ಶಕ್ಯನಾಗದ್ದೇನೆ.

***

*ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತ:  ಸಂಗವರ್ಜಿತ:/*

*ನಿರ್ವೈರ: ಸರ್ವಭೂತೇಷು ಯ: ಸ ಮಾಮೇತಿ ಪಾಂಡವ//೫೫//*

ಹೇ ಅರ್ಜುನಾ! ಯಾವ ಪುರುಷನು ಕೇವಲ ನನಗಾಗಿಯೇ ಸಂಪೂರ್ಣ ಕರ್ತವ್ಯ ಕರ್ಮಗಳನ್ನು ಮಾಡುವವನಾಗಿದ್ದಾನೋ, ನನ್ನ ಪರಾಯಣನಾಗಿದ್ದಾನೋ, ನನ್ನ ಭಕ್ತನಾಗಿದ್ದಾನೋ,ಆಸಕ್ತಿರಹಿತನಾಗಿದ್ದಾನೋ ಮತ್ತು ಸಮಸ್ತ ಪ್ರಾಣಿಗಳಲ್ಲಿ ವೈರಭಾವರಹಿತನಾಗಿದ್ದಾನೋ ಆ ಅನನ್ಯ ಭಕ್ತಿಯುಕ್ತನಾದ ಪುರುಷನು ನನ್ನನ್ನೇ ಹೊಂದುತ್ತಾನೆ.

*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ವಿಶ್ವರೂಪದರ್ಶನಯೋಗೋ ನಾಮ ಏಕಾದಶೋಧ್ಯಾಯ://*

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ