ಗುರುವಂದನ..!
ಕವನ
ತಾನುರಿದು ಹಲವು ಜ್ಯೋತಿಗಳುರಿಸಲು
ಕಾರಣನಾದ ತ್ಯಾಗಿಯೇ...
ಬದುಕ ಪಥದಲಿ ಮಾರ್ಗದರ್ಶಕ
ಮಾದರಿಯಾದ ಯೋಗಿಯೇ.....
ಆದರ್ಶವೆಂಬೀ ಪದಕೆ ಅರ್ಥ
ಸಾರ್ಥಕ್ಯ ನೀಡಿದ ಆದರ್ಶಿಯೇ.....
ನಿ ನೀಡಿದ ದಾನಕ್ಕೆ,
ಹೃದಯ ತನ್ನಿರುವ ಮರೆತು
ಅಂಗೈಗಳಿಗಿಳಿದಿದೆ...
ಮುಗಿದ ಕರಗಳಲಿ ಅಡಗಿ
ಮಿಡಿದಿದೆ ಎಲ್ಲರೆದೆಗಳಲಿ
ನಮೋನ್ನಮ; ಎಂದು....!!
ಗುರು ನೀ ಧನ್ಯ..!
ಇಳೆಗೆ ಅಮೃತದ ಸವಿಯನುಣಿಸುತಿರುವ
ನಿನ್ನ ಬದುಕದು ಧನ್ಯ..!!
ಓ ಮಹಾನ್ ಚೇತನ...!
ನೀ ನಮ್ಮೀ ಭವ್ಯಸಂಸ್ಕೃತಿಯ ಕಣಜ.!
ಅದನ ಎಲ್ಲರೆದೆಗಳಲಿ..
ನಾಟಿ ಮಾಡುವ ನೀ ಅಮರ...!
ಅಮರವೆಂಬೀ ಪದಕ್ಕೊಂದು
ಅರ್ಥ ನಿನ್ನಿಂದ......!!!!
Comments
ಉ: ಗುರುವಂದನ..!
In reply to ಉ: ಗುರುವಂದನ..! by makara
ಉ: ಗುರುವಂದನ..!