ಚಂದ್ರ ನಿನ್ನ ಬಿಂಬ

ಚಂದ್ರ ನಿನ್ನ ಬಿಂಬ

ಕವನ

 

ಚಂದ್ರ ಮೂಡಿದ ಬಾನಿನಲಿ 
ನೀನು ಮೂಡಿದೆ ಚಂದ್ರನಲಿ 
 
ನಕ್ಷತ್ರಗಳನು ಹುಡುಕುತಾ 
ವಿರಹಗಳನು ಎಣಿಸುತಾ 
 
ಮಳೆ ಸುರಿಯಿತು ಬಾನಿಂದ 
ಪನ್ನೀರು ಚಿಮ್ಮಿತು ಕಣ್ಣಿಂದ 
 
ಹೇಳದೆ ಹೋದೆ ಮಾತುನ್ನ ತುಟಿಯಿಂದ 
ಹೃದಯ ಬಯಸಿದೆ ನಿನ್ನೆ ಉಸಿರಿಂದ 
 
ಹೇಗೆ ತಿಳಿಸಲಿ ಪ್ರೀತಿಯ ನಿನಗೆ 
ಹೃದಯ ಬಡಿತ ಜೋರಾಗಿದೆ ಎನಗೆ        
 
ನಿನ್ನೊಂದು ಕಿರು ನಗು ನನಗೊಂದು ಹೊಸ ಜೀವನ ತಂದು   
ಹೇಗೆ ತಿಳಿಸಲಿ ನೀನಿರದ ಬಾಳು ಹೇಗಾಗಿದೆ  ಇಂದು     
    
ಹೃದಯ ಹುಡುಕುತಿದೆ ನಿನ್ನನೆ  
ಬಿಟ್ಟು ಹೋಗದಿರು  ನನ್ನನೆ 

ರಾಘವ ... 
ಸ್ಪೂರ್ತಿ:ಕಠಿಣ ಕವಿ (ವೆಮೋ)