ಚತುರ ಶಿಲ್ಪಿಯವನಾರೇ...?

ಚತುರ ಶಿಲ್ಪಿಯವನಾರೇ...?

ಕವನ

ಮಾನವನ ದೇಹವನು ಏನೆಂದು ಬಣ್ಣಿಸಲಿ

ಇದರದ್ಭುತ ರಚನೆಯ ಕಾರಣೀ ಶಕ್ತಿಯಾರು?

 

ಈ ದೇಹದ ಮೇಲೆ ಚಲಿಸುವ ರುಂಡವನಿಟ್ಟ

ಮಧ್ಯದಲಿ ಜೀರ್ಣಾಂಗ ವ್ಯವಸ್ಥೆಯ ಕೊಟ್ಟ

ಆಚೀಚೆ ಕೈಗಳು; ಕೆಳಗೆ ನಡೆವ ಕಾಲುಗಳಿಟ್ಟ

ಅದ್ಭುತ ಚಲನೆಯ ಬಾಹ್ಯಾಂತರಾಳಕೆ ನೆಟ್ಟ!

 

ಯೋಚಿಸಿ ನಿಯಂತ್ರಿಸಲು ಮಹಾ ಮೆದುಳೇ

ಸಾಗಾಣಿಕೆಗಾಗಿ ರಕ್ತ ಚಲನೆಯ ರಕ್ತನಾಳಗಳೇ

ಹೃದಯ ಬಡಿತಕೊಂದು ಶ್ರುತಿಯ ಮಿಡಿತವೇ

ಇಲ್ಲೊಂದು ಸ್ವಯಂ ಚಾಲಿತ ಶುದ್ಧೀಕರಣವೇ!

 

ವಿಶೇಷ ಜ್ಞಾನ ಪಡೆಯಲು ಜ್ಞಾನೇಂದ್ರಿಯಗಳೇ

ಮನುಷ್ಯನೆಂಬ ದರ್ಪಕಾಗಿ ಅರಿಷಡ್ವರ್ಗಗಳೇ

ಈ ಅದ್ಭುತ ಮಾನವ ಯಂತ್ರ ಸೃಷ್ಟಿಸಿದವನಾರೇ

ಅಗಣಿತ ಭೂ ಜೀವಿಗಳನು ಸೃಷ್ಟಿಸಿದವನಾರೇ?

 

ಸೃಷ್ಟಿಯ ಈ ಕರಕುಶಲ ಮಹಾಶಿಲ್ಪಿಯವನಾರೇ

ಆಸ್ತಿಕರೋ ರೂಪವ ಸೃಷ್ಟಿಸಿ ಆ ದೇವನೆಂಬರೇ

ನಾಸ್ತಿಕರೇ ಇದಕೆ ನಿಮ್ಮಯ ವ್ಯಾಖ್ಯೆಯೊಂದಿರಲಿ

ಓ ಶಕ್ತಿಯೇ ನಾನೋ ನಿನ್ನ ದೀರ್ಘ ಪ್ರಣಾಮದಲಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್