ಚುರುಕು ನಾಲಿಗೆಗೆ...

ಚುರುಕು ನಾಲಿಗೆಗೆ...

Comments

ಬರಹ
ಗೆಳೆಯರೆ,
ಇವತ್ತು, radio ನಲ್ಲಿ fanaa ಹಾಡು ಕೇಳುವಾಗ ಒಂದು ಯೋಚನೆ ಬಂತು.
ಆ ಯೋಚನೆ tounge twisters ಬಗ್ಗೆ. (ಕನ್ನಡದಲ್ಲಿ ಇದಕ್ಕೇನು ಹೇಳುತ್ತಾರೋ ಗೊತ್ತಿಲ್ಲ)
चंदा चंके चं चं - ಇದೇ ಆ ಹಾಡು
ಇದರ ಪ್ರತ್ಯೇಕತೆ ಏನೆಂದರೆ, ಇದರಲ್ಲಿರುವ ಸಾಹಿತ್ಯವನ್ನು fast ಆಗಿ ಹೇಳುವುದು ಕಷ್ಟ.
ಅದರಲ್ಲಿ ಬರುವ ಅಂತಹ ವಾಕ್ಯಗಳನ್ನು ಇಲ್ಲಿ ಹಾಕುತ್ತಿದ್ದೇನೆ:
chanda chamke cham cham chikhen chaukanna chor
chiti chaate chini chatori chinikhor
khadaksingh ke khadakne se khadakti hain khidkiyaan
khidkiyon ke khadakne se khadakta hain khadaksingh
pakke ped par paka papita paka ped ya paka papita
pake ped ko pakde pinku pinku pakde paka papita
ಇದೇ ರೀತಿ, aasmaa ಸಿನಿಮಾದಲ್ಲೂ ಈ ಕೆಳಗಿನ ವಾಕ್ಯವನ್ನು ಬಳಸಿದ್ದಾರೆ:
Chandu ke chacha ne chandu ki chachi ko chandni-chowk
mein chaandi ki chammach se chatni chackaee
ಇದನ್ನು ಬರೆಯುವ ನನ್ನ ಉದ್ದೇಶವೇನೆಂದರೆ, ನನಗೆ ಕನ್ನಡದಲ್ಲಿ ಇಂತಹ tounge twisters ಎಷ್ಟಿರಬಹುದು? ಹಾಗೇ, ಸಿನೆಮಾಗಳಲ್ಲಿ ಇವನ್ನು ಉಪಯೋಗಿಸಿದ್ದಾರೆಯೇ? ಇಂತಹ ಅನುಮಾನಗಳು ಉದ್ಭವವಾಯಿತು.
ಸದ್ಯಕ್ಕೆ ನನಗೆ ನೆನಪಿಗೆ ಬರುತ್ತಿರುವುದು ಇದೊಂದೇ:
ತರೀಕೆರೆ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು.
ಇದು ಎಲ್ಲರಿಗೂ ಗೊತ್ತಿರುವಂಥದ್ಡೇ ಬಿಡಿ (ಎಸ್ಪಿ ಅವರೇ ಹಾಡಿದ್ದಾರೆ ಇದನ್ನು ಕನ್ನಡ ಸಿನೆಮಾದಲ್ಲಿ), ಆದರೆ ಇಂತಹ tounge twisters (ಎಲ್ಲಕ್ಕೂ ಮೊದಲು, ಕನ್ನಡದಲ್ಲಿ ಇದರ ಸಮಾನಾರ್ಥವನ್ನು ದಯವಿಟ್ಟು ಯಾರಾದರೂ ಹೇಳಿ)
ನಿಮಗೆ ಗೊತ್ತಿರುವ ಇಂತಹವನ್ನು ದಯವಿಟ್ಟು ಬರೆಯಿರಿ.
ಮತ್ತೊಂದು ವಿಷಯ...
ಹೀಗೆಯೇ ನೆಟ್ ನಲ್ಲಿ lyricsಗಾಗಿ ತಡವುತ್ತಿದ್ದಾಗ, ಈ "ನಮ್ಮ ಕರ್ನಾಟಕ" ಎಂಬ ಈ website ಕಣ್ಣಿಗೆ ಬಿತ್ತು. ನಿಜವಾಗಿಯೂ ಇದರ ವ್ಯವಸ್ಥಾಪಕರನ್ನು ಅಭಿನಂದಿಸಬೇಕು. ಕನ್ನಡದ ಹಾಡುಗಳು ಕನ್ನಡದಲ್ಲೇ ದೊರೆಯುವುದಾದರೆ ಅದಕ್ಕಿಂತ ಹೆಚ್ಚೇನು ಬೇಕು? ಹಾಗೆಯೇ, ಭಾವಗೀತೆಗಳು, ಭಕ್ತಿಗೀತೆಗಳು, ವಚನಗಳು ಕನ್ನಡದಲ್ಲೇ ದೊರಕಲೆಂದು ಹಾರೈಸುತ್ತೇನೆ.
ನಮಸ್ಕಾರ,
ಮೇಘಶ್ಯಾಂ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet