ನಡುಗು ನೀನು
ಕವನ
ಹಲವು ಭಾಷೆ, ಹಲವು ಧರ್ಮ
ಹಲವು ಸಂಸ್ಕೃತಿಗಳು ಕಲೆತು
ಕರೆದವು ಇದು ನಮ್ಮ ಭಾರತ ದೇಶ,
ಆಂಗ್ಲರ ಗುಲಾಮಗಿರಿಗೆ ಅಂತ್ಯಹಾಡಲು,
ಸತ್ಯ ಅಹಿಂಸೆ, ಅಸಹಕಾರದ ಸೂತ್ರ,
ತೋರಿದ ನಾಯಕ ಗಾಂಧಿ ಅದರ್ಶ ಪುರುಶ.
ಆದರ್ಶ ಸಿದ್ದಾಂತ, ಸಮಾನತೆಯ,
ಚೇತನ ಈ ಸಿದ್ದಿಪುರುಷ, ಆದನು,
ಪ್ರತಿಷ್ಥೆಯ ಸ್ಮಾರಕದ ಮೂರ್ತಿಗಳ ಸ್ಪೂರ್ತಿ ಪುರುಶ .
ಸ್ವಾತಂತ್ರ್ಯಬಂದಿತು ,ಪ್ರ್ಜಾಪ್ರಭುತ್ವ ಅರಳಿತು,
ಆದರೆ ಪಾಳಿಗಾರಿಕೆ ರಕ್ತಗತವಾಗಿ ಪಳೆಯುಳಿಯಿತು,
ಕಪಟಿ ಹರಿಕಾರನೇ ಸರ್ವಾಧಿಕಾರಿ ಆದನು ಇಲ್ಲಿ.
ಪಕ್ಷದೊಳಗಿಂದ ಪಕ್ಷಹುಟ್ಟಿ, ಆಂಧೋಲನವಾಯಿತು,
ಅಧಿಕಾರ ತಂತ್ರ ಅತಂತ್ರವಾಗಿ, ಭ್ರಷ್ಟರಲ್ಲಿ,
ಭ್ರಷ್ಟರು ಜನಿಸಿ ,ಭ್ರಷ್ಟರನ್ನೆ ಬೆಳಿಸಿ ಆಯಿತು.
ಮೌಲ್ಯಕ್ಕೆ ಸಿಹಾಸನ ಕನಸ್ಸಾಗಿ
ಸಿದ್ದಾಂತಕ್ಕೆ ಸೆಡ್ಡುಹೊಡೆದ ಸ್ವಾರ್ಥ ಅರಳಿ,
ಆದರ್ಶದ ಅಂಗಳದಲ್ಲೆ ಅತ್ಯಚಾರ ಮೆರಯಿತು.
ಸಮಾಜದ ಒಡಕಿಗೆ ಧರ್ಮ ಸಂಕೇತವಾಗಿ,
ಅಧಿಕಾರ ಪ್ರಗತಿಗೆ ಮುಳುವಾಗಿ.
ಮೋಢರ ಕೈಗೆ ಗದ್ದಿಗೆಸೇರಿತು
ರಾಜಕಾರಣಿಯ ಅಂಗಳದಲ್ಲಿ, ಚಿಂತಕನ ಚಿಂತೆ,
ಪದವಿ ಪದಕಗಳ ಗಳಕೆಯ ಓಲಗ ಸೇರಿ,
ಹೋಗಳಿಕೆಯ ರಾಗಹಾಡಿ ಮೆರೆಯುವಂತಾಯಿತು.
ಬಡತನ, ಬವಣೆ ಪ್ರಗತಿಯ ಚಿಂತನೆ,
ಯೋಜನೆ ಆಯೋಗಗಳ ಆಯೋಜನೆ,
ಹಸಿವುವಿನ ಹಾ ಹಾಕಾರ , ವರಧಿಗಳಲ್ಲೆ ಮುಚ್ಚಿಹೋಯಿತು.
ಸ್ವಾರ್ಥ ವಿಲಾಸ ಅನಾಚಾರ ನೆತ್ತಿಗೇರಿ
ತುತ್ತುಸಿಗದ ಹಸಿವು , ಬಹುರೂಪಿ,
ಬಹುರಾಷ್ತ್ರಿಯರ ತಂತ್ರಕ್ಕೆ ಆಹಾರವಾಯಿತು.
ಹೇ ಭಾರತ ಭೂಮಿ ಹರಿದ್ವರಣದ ನಡುವಿನಲ್ಲೆ
ನಡುಗು ನೀನು ಒಂದುಸಲ ನಡುಗು,
ಅನಾಚಾರ, ಅನಾಚಾರಿಗೆ ಅಳಿಸಿಹಾಕು, ನಿನ್ನ ಪ್ರತಿಷ್ಠೆ ಯ ತೋರು.
ಮುನೀರ್ ಅಹ್ಮೆದ್ ಕುಂಸಿ
Comments
ಉ: nadugu neenu
In reply to ಉ: nadugu neenu by gurudutt_r
ಉ: nadugu neenu
In reply to ಉ: nadugu neenu by muneerahmedkumsi
ಉ: nadugu neenu
In reply to ಉ: nadugu neenu by gurudutt_r
ಉ: nadugu neenu