ನಾಡಿನ ಸ್ಥಿತಿ

ನಾಡಿನ ಸ್ಥಿತಿ

ಬರಹ
ಹಕ್ಕಬುಕ್ಕರು ಸ್ಥಾಪಿಸಿದ ಕನ್ನಡ ನಾಡು ಕುಲ ಪುರೋಹಿತರ ಕನಸಿನ ಬೀಡು ಹೆಮ್ಮೆಯ ವಿಜಯನಗರದ ದ್ಯೋತಕ ಅಂದು ಆಗಿದ್ದ ವಿಶಾಲ ಕರ್ನಾಟಕ ಹೊಯ್ಸಳ ಬೆಳೆಸಿದ ಬೇಲೂರು ಅರಸರಾಳಿದ ಮೆಚ್ಚಿನ ಮೈಸೂರು ಹೊಸೂರು ಕಾಸರಕೋಡುಗಳ ತವರು ಸೋಲಾಪುರ ಆದೋನಿಗಳು ಪ್ರಿಯರು ಕೋಲಾರ ಹಟ್ಟಿಗಳ ಚಿನ್ನದ ಗಣಿಯು ಕಾವೇರಿ ತುಂಗೆ ಕೃಷ್ಣೆಯರ ಖನಿಯು ಹುಬ್ಬಳ್ಳಿ ಮೈಸೂರು ಸಂಸ್ಕೃತಿಯ ಸೊಗಡು ಎಂದೆಂದಿಗೂ ಆಗದು ಈ ನಾಡು ಬರಡು ಇಂದು ಹರಿದು ಹಂಚಿರುವ ದೇಶವೀ ಕೊಂಪೆ ಅಗೋ ನೋಡು ಒಮ್ಮೆ ಮೆರೆದ ಹಾಳು ಹಂಪೆ ಇನ್ನು ಅಳಿದುಳಿದಿರುವುದು ಚೂರು ಪಾರು ಅದಕ್ಕಾಗಿಯಾದರೂ ಹರಿಸೋಣ ನಮ್ಮ ಬೆವರು ಉದರ ಪೋಷಣೆಗೆಂದು ಬರುತಿಹರು ಇತರರು ಚಿಗುರಿದೊಡನೇ ನಡೆಸುವರು ನಮ್ಮ ಮೇಲೆ ಕಾರುಬಾರು ಪರರ ಕೈಗೆ ಕೊಡಲು ಬೇಡ ಉಳಿದಿರುವುದು ಸೆರಗೊಳಗೆ ಕಟ್ಟಿದ ಕೆಂಡ ನಮ್ಮನ್ನೇ ಸುಡುವುದು ಹಿರಿಯರು ಕಟ್ಟಿದ ನಾಡು ಪರರ ಪಾಲಾಗುವುದು ಸರಿಯೇ ನಮ್ಮ ಪಾಲಿಗೆ ಎಂದಿಗೂ ಇರುವನು ಶ್ರೀ ಹರಿಯೇ ದೇಶದ ಉಳಿವಿಗಾಗಿ ನಾವಿಂದು ತೊಡೋಣ ಪಣ ಅದಕ್ಕಾಗಿ ಹೋರಾಡುವವರ ಕೈ ಜೋಡಿಸೋಣ ಗತ ವೈಭವದ ಗುಂಗಲೇ ಇನ್ನೂ ಕಾಲ ಕಳೆಯುವುದು ಬೇಡ ನಾವೆಲ್ಲಾ ಸೇರಿ ಒಂದಾಗಿರಲು ಯಾರೂ ತೊಂದರೆ ಕೊಡ ವಿಶಾಲ ಕರ್ನಾಟಕದ ಭೂಪಟ ವಿಸ್ತರಿಸೋಣ ಅದಾಗಲಿ ನಮ್ಮ ಮುಖ್ಯ ಧ್ಯೇಯ ಓ ಜಾಣ ಜೈ ಭುವನೇಶ್ವರಿ ಮಾತೆ! ಸಿರಿಗನ್ನಡಂ ಗೆಲ್ಗೆ! ಕನ್ನಡ ಮಾತೆಗೆ ಜಯವಾಗಲಿ!