ನಿನಗಾರು ಸಾಟಿ

ನಿನಗಾರು ಸಾಟಿ

ಕವನ

ಜಗಮಂಡಲಕ್ಕೆ ಆಹಾರ ಪೂರೈಸುವ

ಸೂರ್ಯನೇ ನಿನಗಾರು ಸಾಟಿ

ಬೆಳದಿಂಗಳ ಕಾಂತಿಯ ಬೆಳಗಿಸುವ

ಚಂದ್ರನೇ ನಿನಗಾರು ಸಾಟಿ

 

ಆಕಾಶದಲ್ಲಿ ಮಿಣ ಮಿಣ ಮಿನುಗುವ

ನಕ್ಷತ್ರವೇ ನಿನಗಾರು ಸಾಟಿ

ಕಪ್ಪು ಮೋಡಗಳಿಂದ ಮಳೆ ಸುರಿಸುವ

ವರುಣನೇ ನಿನಗಾರು ಸಾಟಿ

 

ಮಾನವನಿಗೆ ಉಸಿರು ನೀಡುವ

ಮರವೇ ನಿನಗಾರು ಸಾಟಿ

ನಿಸರ್ಗದ ಮಡಿಲಲ್ಲಿ ಹರಿಯುವ

ನೀರೇ ನಿನಗಾರು ಸಾಟಿ

 

ಅಮೃತದ ಸುರಪಾನ ಕೊಡುವ

ಗೋಮಾತೆ ನಿನಗಾರು ಸಾಟಿ

ವೈವಿಧ್ಯಮಯ ಪ್ರಕೃತಿ ಸೃಷ್ಟಿಸಿರುವ

ದೇವನೇ ನಿನಗಾರು ಸಾಟಿ

 

ದೃಷ್ಟಿಯ ನೋಟವು ಕಾಣುವ

ಕಂಗಳೇ ನಿನಗಾರು ಸಾಟಿ

ಪ್ರತಿಕ್ಷಣವೂ ನಿಲ್ಲದೆ ಶ್ರಮಪಡುವ

ಹೃದಯವೇ ನಿನಗಾರು ಸಾಟಿ.

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 

ಚಿತ್ರ್