ನಿವೃತಿ ಜೀವನದ ನೋವು - Part II

ನಿವೃತಿ ಜೀವನದ ನೋವು - Part II

ಬರಹ

ಮನೆನಲ್ಲಿ ತಂಗಿಯ ರಿಜಿಸ್ಟರ್ ಮದುವೆ ವಿಷಯ ಕೇಳಿ ಎಲ್ಲರೂ ಗಾಬರಿ ಆಗ್ತಾರೆ, ಅಕ್ಕನ ಮದುವೆ ಮುಂಚೇನೆ ತಂಗಿ ಮದುವೆ ಮಾಡ್ಕೊಂದಿರೋ ವಿಷಯ ಮನೆನಲ್ಲಿ ಎಲ್ಲರಿಗೂ ಬೇಸರ ಮೂಡಿಸತ್ತೆ, ಆದ್ರೆ ಸಮಯ ಅಲ್ಲಿಗೆ ಮೀರಿ ಹೋಗಿದೆ. ಮುಂದೆ ತಂಗಿನ ಮದುವೆ ಆಗಿರೋ ಹುಡುಗನ ಮನೆಯವರ ಜೊತೆ ಮಾತನಾಡಿ, ಬಂದು-ಬಳಗ ನ ಸೇರಿಸಿ ಚಿಕ್ಕದಾಗಿ ಒಂದು ಪಾರ್ಟೀ ಹಾಲ್ ನಲ್ಲಿ ರಿಸೆಪ್ಶನ್ ಮಾಡಿ ತಂಗಿನ ಗಂಡನ ಮನೆಗೆ ಕಳಿಸಿ ಕೊಡ್ತಾರೆ. ಹೀಗೆ ನನ್ನ ಗೆಳತಿ ಸಂಪಾಡನೆನಲ್ಲಿ ಮನೆ ನಡೀತಾ ಇರೋವಾಗ, ಅವಳಿಗೂ ಈ ವರ್ಷ ಒಳ್ಳೇ ಸಂಬಂದ ಬಂದು ಕಳೆದ ಮೇ ಮಾಸದಲ್ಲಿ ಮದುವೆ ಮಾಡಿದ್ರೂ. ಅಂಕಲ್ ಪಾಪ, ಸಾಲ ಸೋಲ ಮಾಡಿ ಈಗ ೨ಡೂ ಹೆಣ್ಣು ಮಕ್ಕಳ ಮದುವೆ ಮಾಡಿದಾರೆ, ಈಗ ಅವರ ತಂದೆ-ತಾಯಿ ಗೆ ಮಕ್ಕಳು ಕೊಡೋ ದುಡ್ಡಿಂದ ಜೀವನ ನಾಡ್ಸ್‌ಬೇಕು. ಅವರ ತಂದೆಗೆ, ಮದುವೆ ಆಗಿರೋ ಮಕ್ಕಳಿಂದ ದುಡ್ಡು ಥೊಗೊಲೊದಕ್ಕೆ ಮುಜುಗರ ಆದರೆ, ವಿಧಿ ಇಲ್ಲ. ಅವರಿಗೆ ಬೇರೆ ಆದಾಯ ಇಲ್ಲ.

ಕಾಲ ಹೀಗೆ ಇರೋದಿಲ್ಲ ತಾನೆ, ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನೋ ಗಾದೆ ಮಾತಿನ ಪ್ರಕಾರ ಮುಂದೆ ಹೆಣ್ಣು ಮಕ್ಕಳಿಗೂ ಅವರ ತಂದೆ ತಾಯಿ ನ ನೋಡ್‌ಕೋಳೋದಿಕ್ಕೆ ಅವರ ಅತ್ತೆ-ಮಾವ-ಗಂಡನ ಕಡೆಯಿಂದ ಮಾತುಗಳು ಬರಬಹುದು.

ಹೀಗೆ ನಾನು ಈ ಮದ್ಯೆ ತುಂಬಾ ಸಂಸಾರಗಳಲ್ಲಿ ಅಪ್ಪ-ಅಮ್ಮನ ಸಮಸ್ಯೆ ಗಳನ್ನ ಕೇಳ್ತಿದೇನೇ. ಮನಸ್ಸಿಗೆ ತುಂಬಾ ನೋವಾಗತ್ತೆ, ಒಬ್ಬೊಬ್ಬರದು ಒಂದ್ ಒಂದ್ ತರ ಸಮಸ್ಯೆ. ತುಂಬಾ ಯೋಚ್ನೆ ಮಾಡಿದ್ ನಂತರ ನನಗೆ ಒಂದು ಉಪಾಯ ತೋಚಿದೆ, ಅದಕ್ಕೆ ನಿಮ್ಮ ಅನಿಸಿಕೆ ಮತ್ತು ಸಹಾಯ ಕೋರುತ್ತೇನೆ. ನಾನು ವಯಸ್ಸಾದವರಿಗೆ ಒಂದು ಸಣ್ಣ ಕಂಪನೀ ಪ್ರಾರಂಬಿಸೊಣ ಅಂತಿದ್ದೇನೆ. ಅದಕ್ಕೆ ನನ್ನ ಈ ಕಥೆಯ ಗೆಳತಿ ಕೂಡ ಕೈ ಗೂಡಿಸಲು ಸಿದ್ದಳಿದ್ದಾಳೆ. ಈಗ ನಾವಿಬ್ಬರು ಯಾವ ರೀತಿಯ ಕೆಲಸ ೫೦ ವರ್ಷದ ಮೇಲ್ಪಟ್ಟವರಿಂದ ಮಾಡೋಕಾಗತ್ತೆ, ಹೇಗೆ ಅವರಿಗೆ ನಮ್ಮಿಂದ ಸಹಾಯ ಮಾಡಬಹುದು ಅನ್ನೋದರ ಬಗ್ಗೆ ಸ್ವಲ್ಪ ವಿಷಯಗಳನ್ನ ಸಂಗ್ರಹ ಮಾಡ್ತಿದ್ದೇವೆ. ಇದರ ಬಗ್ಗೆ ನಿಮ್ಮ ಸಲಹೆ-ಸಹಾಯ ತುಂಬಾ ಮಹತ್ವ ನೀಡತೆ.

ಏನ್ರೀ ೫೦-೬೦ ವರ್ಷ ವರ್ಗೂ ದುಡ್ಡೀರೋದು ಸಾಲದ, ಇನ್ನೂ ಕೆಲ್ಸಾ ಮಾಡ್ಬೇಡ ಅವರು ಅಂತ ಕೇಳಿದ್ರೆ; ನನ್ನ ಉತ್ತರ : ನಾನು ಶುರು ಮಾಡ್ಬೇಕು ಅನ್ಕೊಂದಿರೋ ಕಂಪನೀ, ವಯಸ್ಸಾದ ಎಷ್ಟೋ ಮಂದಿಗೆ ಮನಷ್ಯಾಂತಿ, ಮನೋಡೈರ್ಯ, ವಿಶ್ವಾಸ, ಉತ್ಸಾಹ ತುಂಬುವಂತಾದ್ಹಾಗಿರಬೇಕು, ಪ್ರತಿ ಯೊಬ್ಬರ ತಂದೆ-ತಾಯಿ ತಮ್ಮ ವಯಸ್ಸಾದಂತ ಕಾಲಕ್ಕೆ ಯಾರಿಂದಲೂ ನೋವನ್ನ ಅನುಭವಿಸದೇ, ತಮ್ಮ ಕೈನಲ್ಲಿ ಆಗೋ ಅಂತ ಕೆಲ್ಸಾ ಮಾಡ್ಕೊಂಡು, ನಿರಾತಂಕವಾಗಿ, ನಿರ್ಭಯದಿಂದ ಜೀವನ ಸಾಗೀಸ್‌ಬೇಕು ಅನ್ನೋದೇ ನನ್ನ ಆಶಯ.