ನೀ ಎಲ್ಲಿ?
ಕವನ
ಅಂದು ನಿನ್ನ ಮಿಂಚು ಮೊಗದಲ್ಲಿ,
ಮೂಡಿದ್ದ ,ಆ ಪ್ರೀತಿಯ ಚೆಲುವು ಎಲ್ಲಿ?
ಆ ಬಳಕುವ ನಿನ್ನ ನಡುವಿನಲ್ಲಿದ್ದ
ರಸ ತುಂಬುವ ಜಾಣದ ಬಿಂಕವೆಲ್ಲಿ?
ಆಂದು ನೀ ಕನಸ್ಸಿನಲ್ಲಿ ನನ್ನನಪ್ಪಿ ಮುತಿಟ್ಟು ರಮಿಸಿದ
ಪ್ರೀತಿಯ ಚಿಲುಮೆಯ ತುಂಟಾಟವೆಲ್ಲಿ?
ಮನದ ಬಯಕೆಯ ಭರದಾಟದಲ್ಲಿ ಭ್ರಮೆಹಿಡಿಸಿದ್ದ
ಆ ಕಣ್ಣ ಸೌಂದರ್ಯದ ಮಿಂಚು ಮಾಟವೆಲ್ಲಿ?
ಸುಪ್ಪತ್ತಿಗೆಯ ಸುರೆಯ ಮತ್ತಿನಲ್ಲಿ ನಮ್ಮಿಬ್ಬರ
ಸಾನಿಧ್ಯ ತಪ್ಪಿಸಿದ್ದ ಆ ಒರಟುತನದ ರಕ್ಷೆ ಎಲ್ಲಿ?
ಎಲ್ಲಲ್ಲೂ ಹರಿದ ಮನ, ಗಲ್ಲಿಗಲ್ಲಿ ಸುತ್ತಿ
ದಣಿದು ಮನದಂಗಳೆಯ ನೆನೆದ ನನ್ನಮನ,
ನಿನ್ನಂಗಳ ಹೊಕ್ಕಿ ಕಂಗಳಲ್ಲೆ
ರಮಿಸಿದ ಆ ಭಾವಮಂದಿರದ
ನನ್ನ ಚೇತನ ಚೆಲುವೆ ನೀನೆಲ್ಲಿ?