ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?

ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?

Comments

ಬರಹ

ಎರಡು ವರ್ಷಗಳ ಹಿಂದೆ ಈ ಅಂಕಣಬರಹಗಳ ಸಂಕಲನರೂಪದಲ್ಲಿ ಪ್ರಕಟವಾದ `ವಿಚಿತ್ರಾನ್ನ' ಪುಸ್ತಕವನ್ನು ಖರೀದಿಸಿದ್ದ ಅಮೆರಿಕನ್ನಡತಿಯೊಬ್ಬರು ನನಗೆ ಒಂದು ಇಮೇಲ್ ಕಳಿಸಿದ್ದರು. ``ಜೋಶಿಯವರೆ, ನಾನು ಹೀಗೆ ಬರೆಯುತ್ತಿರುವುದಕ್ಕೆ ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ನನ್ನ ಗಂಡ ನಿಮ್ಮ ವಿಚಿತ್ರಾನ್ನ ಪುಸ್ತಕವನ್ನು ಬಾತ್‌ರೂಮ್‌ ಬುಕ್ ಆಗಿ ಉಪಯೋಗಿಸುತ್ತಿದ್ದಾರೆ; ಪ್ರಾಥರ್ವಿಧಿಯ ವೇಳೆ ದಿನಕ್ಕೊಂದರಂತೆ ವಿಚಿತ್ರಾನ್ನ ಸಂಚಿಕೆಗಳನ್ನು ಓದುತ್ತಿದ್ದಾರೆ, ತುಂಬಾ ಮೆಚ್ಚಿಕೊಂಡಿದ್ದಾರೆ. ನನಗೂ ಇದರಿಂದ ಖುಶಿಯೇ, ಆ ರೀತಿಯಿಂದಾದ್ರೂ ನಮ್ಮೆಜಮಾನ್ರು ಕನ್ನಡ ಪುಸ್ತಕ ಓದ್ತಾರಲ್ಲಾ ಎಂದು..."! ಪಾಯಿಖಾನೆಯಲ್ಲಿನ ಪರಮೋಲ್ಲಾಸವನ್ನು ಹೆಚ್ಚಿಸುವ ಸತ್ಕಾರ್ಯವನ್ನು ಒಂದು ಪುಸ್ತಕವು ಮಾಡಬಲ್ಲದಾದರೆ/ಮಾಡುತ್ತದಾದರೆ ಅದು ನಿಜವಾಗಿಯೂ ಆ ಪುಸ್ತಕದ ಸಾರ್ಥಕತೆಯೇ! ಬೇಸ್‌ಮೆಂಟಿನ ಕಪಾಟಿನಲ್ಲಿ ಧೂಳು ಹಿಡಿಯುತ್ತಿರುವ ಪುಸ್ತಕಗಳಿಗೆಲ್ಲಿದೆ ಆ ಸಾರ್ಥಕತೆ? ....

ಓದಿ ವಿಚಿತ್ರಾನ್ನ ಶ್ರೀವತ್ಸ ಜೋಷಿಯವರದ್ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet