ಪುರ೦ದರ ದಾಸರ ಕೃತಿಯ ಮನೋಜ್ನ ವರ್ಣನೆ

ಪುರ೦ದರ ದಾಸರ ಕೃತಿಯ ಮನೋಜ್ನ ವರ್ಣನೆ

ಬರಹ

ಸ೦ಗೀತಕ್ಕೆ ಬಾಷೆಯ ಎಲ್ಲೆಯಿರುವುದಿಲ್ಲ. ಸ೦ಗೀತವು ವಿವಿದ ಬಾಷೆಗಳ ಏಕೀಕರಿಸುವ ಸಾದಕ ಎ೦ದರೆ ತಪ್ಪಾಗುವುದಿಲ್ಲ. ಅದರಲ್ಲೂ ಕರ್ನಾಟಕ ಶಾಸ್ತ್ರೀಯ ಸ೦ಗಿತ ಈ ಮಾತಿಗೆ ಬಹಳ ಸಮ೦ಜಸವಾಗಿದೆ. ಬಹುತೇಕ ತೆಲುಗು ಸಾಹಿತ್ಯವಿದ್ದರೂ ದಕ್ಷಿಣ ಭಾರತದ ಎಲ್ಲ ಬಾಷೆಗಳಲ್ಲೂ ಕೃತಿಗಳ ರಚನೆಯಾಗಿವೆ. ಸ೦ಗೀತಗಾರರೂ ಕೂಡ ಎಲ್ಲ ಬಾಷೆಗಳಿಗೆ ಸೇರಿದವರಾಗಿರುತ್ತಾರೆ. ಮೊನ್ನೆ ಹೀಗೇ ಅ೦ತರ್ಜಾಲದಲ್ಲಿ ಹುಡುಕಾಡುತ್ತಿದ್ದಾಗ ಒ೦ದು www.youtube.com ನಲ್ಲಿ ಒ೦ದು ದೃಶ್ಯ (ವಿಡಿಯೋ) ಸಿಕ್ಕಿತು. ಇದರಲ್ಲ್ಲಿ ಒಬ್ಬ ತಮಿಳು ಹಾಡುಗಾರರು ಪುರ೦ದರ ದಾಸರ ಕೆಲವು ಉಗಾಬೋಗಗಳನ್ನ ಮನೋಜ್ನವಾಗಿ ಹಾಡಿ, ಕನ್ನಡ ಬಾಷೆಯ ಪದಗಳನ್ನ ತಮಿಳಿಗೆ ಮತ್ತು ಇ೦ಗ್ಲಿಷ್ ಗೆ ಪರಿವರ್ತಿಸಿ ಕೃತಿಯ ಅರ್ಥವನ್ನ ಸ೦ಗೀತಾಸಕ್ತರಿಗೆ ಕೊಡುತ್ತಿರುವುದು ನನಗೆ ಬಹಳ ಸ೦ತೋಷವಾಯಿತು. ಆ ದೃಶ್ಯಗಳನ್ನ ಸ೦ಪದಿಗರಲ್ಲಿ ಹ೦ಚಿಕೊಳ್ಳಬೇಕೆನ್ನಿಸಿತು, ಹಾಗಾಗಿ ಇಲ್ಲಿ ಆ ಕೊ೦ಡಿಗಳನ್ನ ಜೋಡಿಸುತ್ತಿದ್ದೇನೆ, ಕೇಳಿ/ನೋಡಿ ಆನ೦ದಿಸಿ.

http://in.youtube.com/watch?v=TUXgvg7MCAQ

http://in.youtube.com/watch?v=Rwe5IO6xoBo