ಪ್ರಶ್ನೆಗಳ ಮೆರವಣಿಗೆಯಲ್ಲಿ.....

ಪ್ರಶ್ನೆಗಳ ಮೆರವಣಿಗೆಯಲ್ಲಿ.....

ಕವನ

ಪಂಚಾಂಗದ ಪಗಡೆ


ಎರೆಡೆರೆಡು ಬಾರಿ, ನಿಜದ ಸುಳಿವ ನೀಡುವಲ್ಲಿ


ವಿಫಲವಾದದ್ದೇಕೆ?


 


ಕಳೆದೆರೆಡು ವರುಶದಿಂದ ಹಂಚ್ಹಿಕೊಂಡದ್ದು


ಮನಸ್ಸನ್ನಲ್ಲದೇ ಎಲ್ಲವನ್ನೊ, ಪರಿಣಾಮ,


ಮದುವೆಯ ಮಾತಿಗೊ ಮುನ್ನ, ಪೂರ್ಣವಿರಾಮ!


 


ಹಣ್ಣು, ಕಾಯಿ, ದೊಫ, ಕರ್ಪೂರಗಳ


ಆರತಿ ದಿನಂಪ್ರತಿ ಎತ್ತಿದರೊ, ಕೊನೆ ಮನೆಯ


ಆರ್ಚಕನಿಗೆ ಆ ದೇವರು ಕರುಣಿಸಿದ್ದು, ಅಸ್ತಮ!


 


ನಾಲ್ಕಂಕಳ ಮನೆಯಲ್ಲಿ, ಹತ್ತು ಮಕ್ಕಳನೆತ್ತು


ಸಾಕಿ ಸಲಹಿದ ತಾಯಿ, ಮಕ್ಕಳು ಮೊಮ್ಮಕ್ಕಳಿಗೆ


ರೋಗ ಬರಿತ ಶರೀರವಾಗಿ ಕಂಡದ್ದಾರೊ ಹೇಗೆ?


 


ಓಂದೇ ಏಟಿಗೆ ತೆಂಗಿನ ಕಾಯಿ


ಕೆಳಗುದುರಿಸುವ ದನಗಾಹಿ ಹುಡುಗನಿಗೆ,


ಓಲಂಪಿಕ್ಸ್ ನಲ್ಲಿ ಪ್ರವೇಶ ನಿಶಿದ್ಧ!


 


ಕಾಲಿಗಂಟಿದ ಕೊಳೆ ತೊಳೆಯಲು


ಬಚ್ಹಲ ನೀರು, ಮತ್ತದೆನೆ ಸೋಸಿ


ಕುಡಿಯುವ ಪಾಡು


 


ಮೈ ಮಾರುವ ಹುಡುಗಿ


ಬೀದಿ ಬದಿಯ ನಾಯಿಗೆ ನೀರುಣಿಸುವ ಕರುಣಾಮಹಿ


ತಾಳಿಕಿತ್ತಾದರೊ ಹಣ ತಾ, ಎನ್ನುವ ವೈಧ್ಯೆ ವಿಧ್ಯಾವಂತ ಮಹಾಚತುರೆ


 


ನನ್ನಪ್ಪನ ಆಸ್ತಿ ಅವರಪ್ಪನಿಂದ ಬಂದದ್ದು


ಅವರಿಗೆ ಅವರಪ್ಪನಿಂದ, ಈಗ ನನ್ನದು ನನ್ನ ಮಗನಿಗೆ,


ನ್ಯಾಯದ ತಿರ್ಮಾನ ಸರಿ ಇದ್ದಂತಿಲ್ಲ


 


ಕುರುಡನ ಜೋತೆಗೋಡಿ ಗುರಿತಲುಪಿ


ತಾನೆ ಮೊದಲಿಗನೆಂಬ ಹಂಭಾವ, ನಾಚಿಗೇಡಿ ಮನೊಭಾವ


ಪ್ರಶ್ನೆಗಳ ಮೆರವಣಿಗೆಯಲ್ಲಿ ಉತ್ತರಗಳಿಗೇಕೆ ಕೈ ಕೊಳ, ಬಾಯ್ ಚೀಲ


 


 


 


 


 

Comments