ಮತ್ತೆ ಬಂದಿದೆ ಭಾರತೀಯ ಪಂಚಾಂಗ ಕ್ಯಾಲೆಂಡರ್
ವರ್ಷಾಂತ್ಯ ಬರುತ್ತಿದ್ದಂತೆ ಹೊಸ ವರ್ಷದ ಕ್ಯಾಲೆಂಡರ್ ಗಳು ಮಾರುಕಟ್ಟೆಗೆ ಬರಲು ಪ್ರಾರಂಭವಾಗುತ್ತವೆ. ಕಳೆದ ಎರಡು ವರ್ಷಗಳಿಂದ ಪಂಚಾಂಗ ರೀತಿಯ ಕ್ಯಾಲೆಂಡರ್ ತಯಾರಿಸುತ್ತಿರುವ ಉಡುಪಿಯ ಕೇಶವ ಕೃಷ್ಣ ಮೆಹೆಂದಳೆ ಈ ವರ್ಷವೂ ಇನ್ನಷ್ಟು ಆಕರ್ಷಕ ರೀತಿಯಲ್ಲಿ ೨೦೨೫ರ ಕ್ಯಾಲೆಂಡರ್ ತಯಾರು ಮಾಡಿದ್ದಾರೆ. ಕಳೆದ ವರ್ಷ ಹಲವಾರು ಮಂದಿ ಭಾರತೀಯ ಪಂಚಾಂಗ ಕ್ಯಾಲೆಂಡರ್ ಕೊಂಡು ಸಹಕರಿಸಿದ್ದಾರೆ. ಅದೇ ಉತ್ಸಾಹದಲ್ಲಿ ಈ ವರ್ಷವೂ ಗರಿಷ್ಟ ಗ್ರಾಹಕರನ್ನು ತಲುಪಿ, ಅವರ ವಿಶ್ವಾಸ ಗಳಿಸಿ ಭವಿಷ್ಯದಲ್ಲೂ ಮುಂದುವರಿಯುವುದಕ್ಕೆ ಭದ್ರ ಬುನಾದಿ ಹಾಕುವ ದೃಷ್ಟಿಯಿಂದ ಕ್ಯಾಲೆಂಡರ್ ತಯಾರಿಸಲಾಗಿದೆ.
೨೦೨೫ರ ಕ್ಯಾಲೆಂಡರ್ ನಲ್ಲಿ ಕಳೆದ ವರ್ಷದಂತೆ ಕಿರಿಕಿರಿ ಮಾಡುವ ಜಾಹೀರಾತುಗಳಿಲ್ಲ. ಆ ಸ್ಥಳವನ್ನು ಇನ್ನಷ್ಟು ಮಾಹಿತಿ ನೀಡುವ ಉದ್ದೇಶದಿಂದ ಗ್ರಹಗಳ ಚಲನೆ, ಶುಭ ಮುಹೂರ್ತ, ತಿಂಗಳ ಕನ್ನಡ ಕವಿ ಹಾಗೂ ರಾಷ್ಟ್ರೀಯ ಘಟನೆ/ ಮಹಾಪುರುಷರ ಬಗ್ಗೆ ವಿವರಗಳಿಗೆ ಬಳಸಿಕೊಳ್ಳಲಾಗಿದೆ. ಅಲ್ಲದೆ, ಸೌರಮಾನ ದಿನ, ಅಪರಾಹ್ನದ ಸಮಯಕ್ಕೆ ಹೊಂದುವ ಶ್ರಾದ್ಧ ತಿಥಿಯನ್ನೂ ನೀಡಲಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಪಂಚಾಂಗ ಶ್ರವಣ ಫಲ - ಪಂಚಾಂಗ ಓದುವ ಪ್ರಯೋಜನ ಮಂತ್ರ, ದಿನದ ತಿಥಿ ದೊಡ್ಡ ಅಕ್ಷರಗಳಲ್ಲಿ, ತಿಥಿ, ನಕ್ಷತ್ರ್ಯಾದಿಗಳ ಆರಂಭ - ಅಂತ್ಯ ಸಮಯ ಗಂಟೆ ನಿಮಿಷಗಳಲ್ಲಿ, ಸೂರ್ಯೋದಯಕ್ಕನುಗುಣವಾಗಿ ನಿಖರವಾದ ರಾಹು-ಗುಳಿಗಕಾಲ, ಚಿತ್ರ ಸಹಿತ ತಿಂಗಳ ಹಬ್ಬಗಳ ಮಾಹಿತಿ, ಸರಕಾರಿ-ಬ್ಯಾಂಕ್ ರಜೆ, ಹಬ್ಬದ ದಿನ, ಜಾತ್ರೆಗಳ ಸ್ಪಷ್ಟ ವಿಂಗಡಣೆ ಮಾಹಿತಿಗಳನ್ನು ನೀಡಲಾಗಿದೆ.
ಕನ್ನಡ ಭಾಷೆಯನ್ನು ತಿಳಿಯದ ಅನ್ಯ ಭಾಷಿಕರಿಗೂ ಅನುಕೂಲವಾಗುವಂತೆ ಈ ವರ್ಷ ಭಾರತೀಯ ಪಂಚಾಂಗ ಕ್ಯಾಲೆಂಡರ್ ಅನ್ನು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲೂ ಮುದ್ರಿಸಲಾಗಿದೆ. ಆದರೆ ಈ ಕ್ಯಾಲೆಂಡರ್ ಗಳು ಮುಂಗಡ ಕಾಯ್ದಿರಿಸುವ (Advance Booking) ಮೂಲಕ ಮಾತ್ರ ಪಡೆದುಕೊಳ್ಳಬಹುದು ಎನ್ನುತ್ತಾರೆ ಮೆಹಂದಳೆಯವರು. ಈ ಪಂಚಾಂಗವನ್ನು ಓದುವ, ಅದರಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳುವ ಬಗ್ಗೆ, ನಿಮಗಿರುವ ಎಲ್ಲಾ ಸಂದೇಹಗಳನ್ನು ನಿವಾರಿಸಿಕೊಳ್ಳಲು, ಕ್ಯಾಲೆಂಡರ್ ಖರೀದಿಸಲು ನೀವು ಮೊಬೈಲ್ ಸಂಖ್ಯೆ: 8310893526, 9483784913 ನ್ನು ಸಂಪರ್ಕಿಸಬಹುದು.