ಮತ್ತೆ ’ಆಸು’; ಈ ಸಲ ’ಸಿಲ್‌ಸಿಲಾ’

ಮತ್ತೆ ’ಆಸು’; ಈ ಸಲ ’ಸಿಲ್‌ಸಿಲಾ’

ಬರಹ


  ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್‌ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ:

http://sampada.net/blog/asuhegde/20/10/2010/28592

   ಮೂಲ ಗೀತೆಗಳಂತೆಯೇ ಆಸು ಅವರ ಭಾವಾನುವಾದಗಳೂ ಓದುಗರಲ್ಲಿ ಭಾವತರಂಗಗಳನ್ನೆಬ್ಬಿಸುತ್ತವೆ. ಪ್ರಸ್ತುತ ಭಾವಾನುವಾದ ಕೂಡ ಈ ಮಾತಿಗೆ ಹೊರತಲ್ಲ.
  ’ಸಿಲ್‌ಸಿಲಾ’ ಚಿತ್ರದ ಅಮಿತಾಭ್-ರೇಖಾರ ಪ್ರಣಯಗಾಥೆಯಲ್ಲಿ, ಅಮಿತಾಭನೊಡನೆ ರೇಖಾಳ ನಿಜಜೀವನದ ವಿಫಲ ಪ್ರೇಮದ ಛಾಯೆ ಇರುವುದು ಸ್ಪಷ್ಟ. ಇದನ್ನರಿತು ಮೇಲ್ಕಂಡ ಚಂಪೂಗೀತೆಯನ್ನು ಓದಿದಾಗ ಅದರ ಇನ್ನೊಂದು ಮುಖದ ದರ್ಶನ ನಮಗಾಗುತ್ತದೆ.
  ಚಿತ್ರದಲ್ಲಿ ಶಶಿಕಪೂರ್ (ಮತ್ತು ನಂತರ ಅವನ ಮಗು) ಅಪಘಾತದಲ್ಲಿ ಮರಣಹೊಂದಿದರೆ ನಿಜಜೀವನದಲ್ಲಿ ಅಮಿತಾಭ್ (’ಕೂಲಿ’ ಚಿತ್ರದ ಚಿತ್ರೀಕರಣದ ವೇಳೆ ಬೆಂಗಳೂರಿನಲ್ಲಿ) ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿ ರೇಖಾಳ ಹೃದಯಮಿಡಿತ ತೀವ್ರಗೊಳಿಸಿದ. ತಾನು ಬಯಸಿದ ಹೂವು ತನಗೆ ಗಗನಕುಸುಮವಾದ ತನ್ನ ನಿಜಜೀವನಗಾಥೆಯ ತೀವ್ರಭಾವ ಈ ಚಿತ್ರದಲ್ಲಿ ರೇಖಾಳ ಅಭಿನಯದಲ್ಲಿ ಢಾಳವಾಗಿ ವ್ಯಕ್ತವಾಗಿದೆ. ಪಾಪ, ರೇಖಾ!
  ಆಸು ಅವರಲ್ಲಿ ಭಾಷಾ ಸಾಮರ್ಥ್ಯ ಮತ್ತು ಭಾವುಕತೆ ಎರಡೂ ಇರುವುದರಿಂದ ಭಾವಾನುವಾದ ಸೊಗಸಾಗಿ ಮೂಡಿಬಂದಿದೆ. ಅದು ಇನ್ನಷ್ಟು ಉತ್ತಮಗೊಳ್ಳುವ ನಿಟ್ಟಿನಲ್ಲಿ ನನ್ನದೊಂದು ಸಲಹೆ: ಮುಂದಿನ ಸಲ ಭಾವಾನುವಾದ ಮಾಡುವಾಗ ಅವರು ಆದಷ್ಟೂ ಕಾವ್ಯಭಾಷೆಯನ್ನು ಬಳಸುವ ಯತ್ನ ಮಾಡಲಿ. ಕಾವ್ಯಭಾಷೆಯಲ್ಲಿ ಭಾವಸ್ಫುರಣ ಎಂದಿಗೂ ದಟ್ಟವಾಗಿರುತ್ತದೆ.