ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ

ಕವನ

 

ಮರಿ ಅಂದ್ರ ಹ್ಯಾಂಗ ಮರೀಲಿ


ಮರಿ ಅಂದ್ರ ಹ್ಯಾಂಗ ಮರೀಲಿ

 

ಮೊದಲ ಸಲ ನೋಡಿ ನಾಚಿದಾಗ

ನಿನಗೆ ನಾ ಇಷ್ಟವೆಂದು ತಿಳಿದಾಗ

ಕದ್ದ ಕನಸಿನಲ್ಲಿ ಮನಸ್ಸು ಕೊಟ್ಟಿದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ

 

ಮನ್ಯಾಗ ಹೇಳದ ಭೇಟಿ ಆದಾಗ

ಇದ್ದಂತ ಅರಿವ್ಯಾಗ ನೀ ನನ್ನ ನೋಡಿದಾಗ

ಚಂದ ಕಾಣ್ತೀಯೆಂದು ಫೋಟೋ ತಗೆದಿದ್ದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ

 

ರಗ್ಗಿನ ಒಳಗೆ ರಾತ್ರಿ ಮೊಬೈಲಿನಲ್ಲಿ  ಮಾತಾಡಿದಾಗ

ಅದನ್ನ ಅವ್ವ ಅಪ್ಪ ಕೇಳಿಸಿಕೊಂಡಾಗ

ರಾತ್ರಿ ಪುಸ್ತಕ ಓದ್ತಿದ್ದೆ ಎಂದು ಸುಳ್ಳು ಹೇಳಿದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ

 

ಕನಸಿನ್ಯಾಗ ನೀ ಬಂದು ಕರದಂಗಾಗಿ

ಮಂಚದ ಮೇಲಿಂದ ಕೆಲ ಬಿದ್ದಾಗ

ಸೊಂಟ ಮುರಿದರು ನಿನ್ನ ನೆನಪಾಗಿ ನಗುತ ಎದ್ದಿದ್ದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ

 

ಅಪ್ಪ ಅವ್ವಗ ನಮ್ಮ ಪ್ರೀತಿ ತಿಳಿದಾಗ

ನನ್ನ ಮ್ಯಾಲಿನ ಪ್ರೀತಿ ಅವರನ್ನ ಒಪ್ಪಿಸಿದಾಗ

ನನಗಾದ ಖುಷಿಗೆ ನಾ ಓಡಿ ಬಂದು ನಿನಗ ಅಪ್ಪಿದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ

 

ಮದುವೀಗಿ ಒಂದು ವರುಷ ಕಳೆದಾಗ

ನಿನಗ ನನ್ನ ಮ್ಯಾಲಿನ ಪ್ರೀತಿ ಕಡಿಮಿ ಆದಾಗ

ನನ್ನನ್ನ ಮರೆತು ತಿರಗಿ ಬರಬ್ಯಾಡಂತ ಹೇಳಿದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ

 

ನನ್ನ ಪ್ರೀತಿ ಅವನು ಮರೆತಾಗ

ನಾ ಇದ್ದು ಜಗದಾಗ ಇಲ್ಲದಾಂಗ

ವಿಷ ಕುಡಿಯುವಾಗ ತವರಮನಿ ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದನ್ನ


ಮರಿ ಅಂದ್ರ ಹ್ಯಾಂಗ ಮರೀಲಿ 

 


ಮರಿ ಅಂದ್ರ ಹ್ಯಾಂಗ ಮರೀಲಿ


ಮರಿ ಅಂದ್ರ ಹ್ಯಾಂಗ ಮರೀಲಿ

 

 


 

Comments