ಮಾಧ್ಯಮದ ಮಿತ್ರರಿಗೊಂದು ಬಹಿರಂಗ ಪತ್ರ

ಮಾಧ್ಯಮದ ಮಿತ್ರರಿಗೊಂದು ಬಹಿರಂಗ ಪತ್ರ

Comments

ಬರಹ

>> ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ.
>> ------------------------------------------------
>>
>> ಸತ್ಯಶೋಧನೆ, ಸಾರ್ವಜನಿಕ ಹಿತಾಸಕ್ತಿಗಳು ಪತ್ರಿಕೋದ್ಯಮದ - ಸಮೂಹ ಮಾಧ್ಯಮಗಳ
>> ಅಡಿಪಾಯಗಳಾಗಿದ್ದ ಕಾಲವೊಂದಿತ್ತು. ಅದು ಸತ್ಯಯುಗದ ಕಾಲ, ಇಂದಿನ ಕಲಿಯುಗಕ್ಕೆ
>> ಹೊಂದುವುದಿಲ್ಲ ಎಂಬ ಭಾವನೆ, ಮಾಧ್ಯಮಗಳ ಇಂದಿನ ಕೆಲವು ಮಿತ್ರರಿಗೆ ಇದ್ದಂತಿದೆ.
>> ಕನ್ನಡದ ಕೆಲವು ಸುದ್ದಿವಾಹಿನಿಗಳು, ಹಿಂದಿ / ಇಂಗ್ಲಿಷ್ ಭಾಷೆಗಳ ಕೆಲವು
>> ವಾಹಿನಿಗಳು,
>> ಒಂದೆರಡು ಪತ್ರಿಕೆಗಳು, ಭಯೋತ್ಪಾದಕರ ಕುಟುಂಬದವರಿಗೆ ಇದೀಗ ನೀಡುತ್ತಿರುವ
>> ಪ್ರಚಾರ
>> ಅಪಾಯಕಾರಿಯಾಗಿದೆ, ಸಾರ್ವಜನಿಕರ - ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ.
>> ಬಂಧಿತ
>> ಆಪಾದಿತರ ತಾಯಿಯಾಗಲೀ, ಕುಟುಂಬದ ಉಳಿದ ಸದಸ್ಯರಾಗಲೀ, ಆಪಾದಿತರನ್ನು ಅಮಾಯಕರೆಂದೇ
>> ಪ್ರತಿಪಾದಿಸುತ್ತಾರೆ. ಅದರಲ್ಲಿ ಆಶ್ಚರ್ಯಪಡುವಂತಹುದೇನಿಲ್ಲ. ’ನಮ್ಮ ಮಗನಿಗೆ
>> ಭಯೋತ್ಪಾದಕರೊಂದಿಗೆ ಸಂಪರ್ಕವಿತ್ತು’ ಎಂದು ಯಾರು ತಾನೇ ಹೇಳಿಯಾರು ? ಬಿಡಿ.
>> ಪ್ರಶ್ನೆ ಅದಲ್ಲ. ಅವರಿಗೆ ಅಷ್ಟೊಂದು ಪ್ರಚಾರ ಏಕೆ ?
>>
>> ನಿಜವಾಗಲೂ ವಿಸ್ಮಯ, ವಿಚಿತ್ರ ಎನಿಸುವುದು. ಈ ಕಾರಣಕ್ಕೇ.
>>
>> ಜನಮಾನಸದ ಹೆಂಗರುಳು ಬೇಗ ಕರಗಿಹೋಗಿಬಿಡುತ್ತದೆ. ಯಾವುದೋ ಸುದ್ದಿಯ ತುಣುಕು,
>> ಇನ್ನಾವುದೋ ದೃಶ್ಯ - ಶ್ರವ್ಯ (ವೀಡಿಯೋ) ತುಣುಕು, ಸಾರ್ವಜನಿಕರ ಬಹುಕಾಲದ
>> ಮಾನಸಿಕತೆಯನ್ನೇ ಬದಲಿಸಿಬಿಡುತ್ತದೆ. ಭಯೋತ್ಪಾದಕರಿಂದ ತೊಂದರೆಗೀಡಾದ -
>> ಹತ್ಯೆಗೀಡಾದ
>> ಸಾರ್ವಜನಿಕರ - ಪೊಲೀಸರ ದುಃಖ - ದುಮ್ಮಾನಗಳನ್ನು ತಕ್ಷಣ ಮರೆತು, ಭಯೋತ್ಪಾದಕರ
>> ಮನೆಯವರ ಬಗೆಗೆ "ಅಯ್ಯೋ ಪಾಪ" ಎಂದುಬಿಡುತ್ತೇವೆ. ಇದು ಮಾಧ್ಯಮದ ಕೆಲವರ
>> "ಕೊಡುಗೆ".
>> ಅನಗತ್ಯ ವೃತ್ತಿ ಸಂಬಂಧಿತ ಸ್ಪರ್ಧೆ ಮತ್ತು ರೋಚಕತೆಗಳಿಗೆ ಶರಣಾಗುವುದರಿಂದಾಗುವ
>> ಅಪಾಯವಿದು.
>>
>> ನಕ್ಸಲೀಯರು ಶೇಷಪ್ಪಗೌಡ, ಕೆಸಮುಡಿ ವೆಂಕಟೇಶರನ್ನು, ಪೊಲೀಸರಿಗೆ ಮಾಹಿತಿ
>> ನೀಡಿದರೆಂಬ
>> ಕಾರಣಕ್ಕೆ ಅಮಾನುಷವಾಗಿ ಕೊಂದು ಹಾಕಿದರು. ಆ ಕುಟುಂಬಗಳ ಕಥೆಯೇನು ? ಗತಿಯೇನು ?
>> ನಕ್ಸಲ್‘ರನ್ನು ನಿಗ್ರಹಿಸಲು ಮೀಸಲಾಗಿ, ಊಟ - ತಿಂಡಿ- ವಿಶ್ರಾಂತಿ ಇಲ್ಲದೆ
>> ಕಾಡು-ಮೇಡು ಅಲೆಯುತ್ತಿರುವ ಪೊಲೀಸ್ ಪೇದೆಗಳ ಗತಿಯೇನು ? ವಿಚಿತ್ರವೆಂದರೆ
>> ಹಿಂಸೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡಿರುವ ನಕ್ಸಲ್ ಹುಡುಗ ಹುಡುಗಿಯರಿಗೆ, ಅವರ
>> ಸಾವಿಗೆ ಸಿಕ್ಕುವ ಪ್ರಚಾರ, ದುರದೃಷ್ಟದಿಂದ ನಕ್ಸಲ್‘ರಿಂದ ಹತ್ಯೆಗೀಡಾದ
>> ಪೊಲೀಸರ
>> ಕುಟುಂಬಗಳಿಗೆ - ಸಾರ್ವಜನಿಕರಿಗೆ ಸಿಕ್ಕುತ್ತಿಲ್ಲ.
>>
>> ಹಿಂದೆ ವೀರಪ್ಪನ್ ಪ್ರಕರಣದಲ್ಲೂ ಹೀಗೇ ಆಗಿತ್ತು. ನೂರಾರು ಜನ ಪೊಲೀಸರನ್ನು -
>> ಅಧಿಕಾರಿಗಳನ್ನು ಆತ ನಿರ್ದಯವಾಗಿ ಕೊಂದು ಹಾಕಿದ್ದ. ವೀರಪ್ಪನ್ ಅಂತಹವರಿಗೆ
>> ಕ್ಷಮೆಯೇ
>> ಇಲ್ಲ. ಆದರೆ, ವೀರಪ್ಪನ್ ಸಾವಿನ ನಂತರ, ಕೆಲವು ವಾಹಿನಿಗಳವರು, ಅವನ ಹೆಂಡತಿ
>> ಮುತ್ತುಲಕ್ಷ್ಮಿಗೆ ಅವಳ ನೋವಿಗೆ - ಅವಳ ಆರ್ಭಟಕ್ಕೆ ವಿಪರೀತ ಪ್ರಚಾರ ನೀಡಿದರು.
>> ಆವಳ
>> ಮಗುವಿನ ಭವಿಷ್ಯವೇನು ಎಂಬ ಕರುಣಾರ್ದ್ರ ಪ್ರಶ್ನೆಗಳನ್ನು ವೀಕ್ಷಕರಿಗೆ
>> ಹಾಕಲಾಯಿತು.
>>
>> ಹನೀಫ್ - ಸಬೀಲ್ ಸದ್ಯಕ್ಕೆ ಆಪಾದಿತರಿರಬಹುದು, ಅಪರಾಧಿಗಳೆಂದು ಇನ್ನೂ
>> ಸಾಧಿತವಾಗದೇ
>> ಇರಬಹುದು. ಅವರ ಕುಟುಂಬಗಳಿಗೆ ಸಿಕ್ಕುತ್ತಿರುವ ಪ್ರಚಾರ ಅನಾರೋಗ್ಯಕರ. ಸಂಸತ್ತಿನ
>> ಮೇಲೆ ದಾಳಿಮಾಡಿದ ಭಯೋತ್ಪಾದಕನಿಗೆ ಕ್ಷಮಾದಾನ ಸಿಕ್ಕಬೇಕೆಂದು ಕೆಲವರು ಪ್ರದರ್ಶನ
>> ಮಾಡಿದುದು ಸಹ ಈ ಸಾಲಿಗೇ ಸೇರುವಂತಹುದು. ಅವರಿಗೆ ದೊರೆತ ಅತಿಯಾದ ಪ್ರಚಾರವೂ
>> ಬೇಸರ
>> ತರಿಸುವಂತಹುದು. ಸಂಸತ್ತಿನ ಮೇಲಾದ ಆ ದಾಳಿಯಲ್ಲಿ ಮಡಿದ ರಕ್ಷಣಾ ಸಿಬ್ಬಂದಿಯ
>> ಮನೆಯವರಿಗೆ ಇನ್ನಷ್ಟು ನೋವು ತರುವುದು ಶೋಭೆ ತರುವುದಿಲ್ಲ. ನಮ್ಮನ್ನು
>> ಉಳಿಸಲುಹೋದವರು ಅವರು.
>>
>> ಮುಸ್ಲಿಮರಲ್ಲಿ ಪ್ರೊ|| ಮಮ್ತಾಜ್ ಅಲಿ ಖಾನ್ ಅಂತಹವರು, ಕನ್ನಡದ ಬಗ್ಗೆ ಹೋರಾಟ
>> ಮಾಡಿ
>> ಜನರ ಗೌರವ ಪಡೆದಂಥವರು. ಶಾಂತಿ, ಸೌಹಾರ್ದ, ಮಾನವಹಕ್ಕುಗಳು, ಸ್ವಾಭಿಮಾನ,
>> ಸಮಾನತೆಗಳಿಗಾಗಿ ತಮ್ಮ "ಕ್ರಶ್ (CRUSH)" ಪತ್ರಿಕೆಯ ಮೂಲಕ, ಅವರು
>> ಮೂಢನಂಬಿಕೆಗಳ
>> ವಿರುದ್ಧ, ಶೋಷಣೆ - ಅತ್ಯಾಚಾರ - ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಿದ್ದಾರೆ.
>> ಎಂತಹ
>> ವಿರೋಧಾಭಾಸ. ಪ್ರೊ|| ಮಮ್ತಾಜ್ ಅಲಿ ಖಾನ್ ಅವರಿಗಿಂತ, ಪ್ರಗತಿಪರ
>> ಮುಸ್ಲಿಮರಿಗಿಂತ
>> ಭಯೋತ್ಪಾದಕ ಮುಸ್ಲಿಮರ ಮನೆಯವರು ಪ್ರಚಾರ ಗಳಿಸುತ್ತಾರೆ.
>>
>> ಪ್ರೀತಿಯ ಪತ್ರಕರ್ತ ಮಿತ್ರರೇ, ಪ್ಲೀಸ್ ಪ್ಲೀಸ್, ನಿಮ್ಮ ಕೆಲಸ ಸಮಾಜಕ್ಕೆ
>> ಮಾರಕವಾಗದಿರಲಿ.
>>
>>
>> ಮಂಜುನಾಥ ಅಜ್ಜಂಪುರ, ಬೆಂಗಳೂರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet