ಮೆಂತ್ಯದ ಹಿಟ್ಟು

ಮೆಂತ್ಯದ ಹಿಟ್ಟು

ತಯಾರಿಸುವ ವಿಧಾನ

ಎಲ್ಲ ಬೇಳೆಗಳನ್ನು ಒಂದೊಂದಾಗಿ ಸಂಪಿಗೆ ಬಣ್ಣ ಬರುವಂತೆ ಹದವಾಗಿ ಸಣ್ಣ ಉರಿಯಲ್ಲಿ ಹುರಿಯುವುದು. ಅರಿಸಿನ ಪುಡಿ ಹಾಗೂ ಇಂಗನ್ನು ಸಣ್ಣ ಉರಿಯಲ್ಲಿ ಸೇರಿಸಿ ಹುರಿಯುವುದು. ಹುರಿದಿರುವುದನ್ನು ಎಲ್ಲ ಸೇರಿಸಿ ಮಿಕ್ಸರಿನಲ್ಲಿ ಪುಡಿ ಮಾಡಿಟ್ಟುಕೊಳ್ಳುವುದು. ಉಪಯೋಗಿಸುವ ಬಗೆ: * ಮೆಂತ್ಯದ ಹಿಟ್ಟಿನ ಗೊಜ್ಜು ಮಾಡಬಹುದು. * ಶಾವಿಗೆ ಬಾತ್, ಉಪ್ಪಿಟ್ಟಿಗೆ ಸೇರಿಸಿ ತಿನ್ನಬಹುದು * ಬಿಸಿಯಾದ ಅನ್ನಕ್ಕೆ ಸೇರಿಸಿ ಉಪ್ಪು ತುಪ್ಪ ಹಾಕಿ ತಿನ್ನಬಹುದು. (ಹಿರಿಯರು ಈ ಉಪಯೋಗ ವಿಧಾನವನ್ನು ಆರೋಗ್ಯವಾದುದೆಂದು ಹೇಳುತ್ತಾರೆ)

(ಬಹಳ ದಿನಗಳವರೆಗೆ ಇಡಬಹುದು - ಕೆಡುವುದಿಲ್ಲ)

90

ಕಾಳುಗಳನ್ನು ಸೇರಿಸಿ ಮಾಡಲಾಗುವ ಒಂದು ಸಾಂಪ್ರದಾಯಿಕ ಪುಡಿ (ಹಿಟ್ಟು). ಆರೋಗ್ಯಕ್ಕೆ ಉತ್ತಮವಾದದ್ದು.

ಕಡ್ಲೆಬೇಳೆ - ೧ ಕಪ್

ಉದ್ದಿನಬೇಳೆ - ೧ ಕಪ್

ಹೆಸರುಬೇಳೆ - ೧ ಕಪ್

ತೊಗರಿಬೇಳೆ - ೧ ಕಪ್

ಗೋಧಿ - ೧ ಕಪ್

ಮೆಂತ್ಯ - ೧/೪ ಕಪ್

ಅರಿಸಿನ ಪುಡಿ - ೧/೨ ಕಪ್

ಹಿಂಗು - ರುಚಿಗೆ ತಕ್ಕಂತೆ (ಪುಡಿ ಮಾಡಿದ ಹಿಂಗು)