ರಸಪ್ರಶ್ನೆ- 1
ಒಗಟುಗಳನ್ನು ಬಿಡಿಸಿ
1. ಅಕ್ಕ ಅಕ್ಕ ಬಾವಿ ನೋಡು
ಬಾವಿಯೊಳಗೆ ನೀರು ನೋಡು
ನೀರಿನೊಳಗೆ ಬಳ್ಳಿ ನೋಡು
ಬಳ್ಳಿಗೊಂದು ಹೂವು ನೋಡು
2. ಬಡಗಿ ಮಾಡಿದ ಬಂಡಿಯಲ್ಲ
ಮನುಷ್ಯ ಮಾಡಿದ ಯಂತ್ರವಲ್ಲ
ಒಂದು ನಿಮಿಷವೂ ಪುರುಸೊತ್ತಿಲ್ಲ
3 .ಕಾಲಿಲ್ಲದೆ ನಡೆಯುವೆನು
ಬಾಯಿಯಿಲ್ಲದೆ ನುಡಿಯುವೆನು
ಓಡಿ ಓಡಿ ನನ್ನ ಊರು ಸೇರುವೆನು
4. ಹಸಿರು ಕೋಟೆ
ಅದರೊಳಗೆ ಬಿಳಿಯ ರಾಜ
ಕದ ತೆರೆದರೆ ಬರುತ್ತಾರೆ ಕರಿ ಸೈನಿಕರು
5. ಕಂಠದಲಿ ಕಪ್ಪುಂಟು ಕರಿಕಂಠನಲ್ಲ
ಗಿಂಟದಲಿ ಜುಟ್ಟುಂಟು ವಿಪ್ರ ತಾನಲ್ಲ
ಮೈಯ್ಯಲ್ಲಿ ಕಣ್ಣುಂಟು ದೇವೇಂದ್ರನಲ್ಲ
6. ಬಾಲವಿಲ್ಲದ ಬಜಾರಿ
ನಾಕ್ಕಾಲಿನ ಕಠಾರಿ
ನೀರಿನಲ್ಲಿರುವ ಸಿಂಗಾರಿ
ಇದ ಹೇಳ್ದೋರ್ಗೆ ಚಿನ್ನದ ಕಠಾರಿ
7. ಹುಟ್ಟುತ್ತಲೆ ಹಸುರುಂಟು ಪಚ್ಚೆ ತಾನಲ್ಲ
ಬೆಳೆಯುತ್ತಲೆ ಕೆಂಪುಂಟು ನವರತ್ನವಲ್ಲ
ಕಡೆಕಡೆಗೆ ಕಪ್ಪುಂಟು ಕಸ್ತೂರಿಯಲ್ಲ
ಇದ ಹೇಳಬಲ್ಲ ಜಾಣರಿಗೆ ಅರಿಯದೇ ಇಲ್ಲ
8. ಮೊಗ್ಗರಳಿ ಹೂವಾಗಿ ಪುಷ್ಪ ತಾನಲ್ಲ
ಹಿಗ್ಗಲಿಸಿ ನೋಡಿದರೆ ಪರಿಮಳವೆ ಇಲ್ಲ
9. ಚಿಕ್ಕ ಚಿಕ್ಕ ಪೆಟ್ಟಿಗೆ
ಚಿನ್ನದ ಪೆಟ್ಟಿಗೆ
ಮುಟ್ಟಿ ತೆಗೆದರೆ ಮುನ್ನೂರು ಪೆಟ್ಟಿಗೆ
10. ಕುಂಬಾರ ಮಾಡಿದ ಮಡಿಕೆಯೇನಾಗಲಿಲ್ಲ
ಅಗಸ ಬಟ್ಟೆ ಒಗೆಯುವ ಮಡುವಾಗಲಿಲ್ಲ
ಸೂರ್ಯ ನೋಡಿದ ನೀರಾಗಲಿಲ್ಲ
ಹಾಗಾದರೆ ನಾನ್ಯಾರು?
ಗಾದೆಗಳ ಮೊದಲ ಭಾಗವನ್ನು ಕೊಡಲಾಗಿದೆ. ಮೊದಲ ಭಾಗವನ್ನು ಪುಷ್ಠೀಕರಿಸುವಂತಿರುವ ಮುಂದಿನ ಭಾಗವನ್ನು ತಿಳಿಸಿ.
1.ಮಾತು ಮನೆ ಕೆಡಿಸಿತು. _________________________.
2.ಅಗಸನಿಗೊಂದು ಬಿದ್ದ ಕಲ್ಲು. ________________________.
3.ಊರಿಗೆ ಹಂದಿ ಬೇಕು. _____________________________.
4.ಎಳೆಗರು ಎತ್ತಲ್ಲ. _________________________________.
5.ಕಪಿ ಹೆಚ್ಚಿದ ತೋಟ ಹಾಳು. ________________________.
6.ಮಾತಿನಲ್ಲಿ ಮಳ್ಳಿ. ________________________________.
7.ನಾಲಿಗೆಗೆ ನೋವಿಲ್ಲ . _____________________________.
8.ಹಂದಿಯಂತೆ ನೂರುವರ್ಷ ಬಾಳುವುದಕ್ಕಿಂತ _______________________________.
9.ಕೊಲ್ಲು ಅಂದ್ರೆ ಕಪ್ಪೆಗೆ ಕೋಪ. _____________________________.
10.ಕುಂಟೆತ್ತು ಹೊಲಕ್ಕೆ ಮಾರಿ .__________________________________.
ನುಡಿಗಟ್ಟಿನ ಅರ್ಥ ತಿಳಿಸಿ.
1. ಆಕಾಶಕ್ಕೇರು
2. ಒಂಟಿ ಕಾಲಿನ ಮೇಲೆ ನಿಲ್ಲು
3. ಕಾಲು ಕಟ್ಟು
4. ಕೂಪ ಮಂಡೂಕ
5. ತಲೆಯ ಮೇಲೆ ಹಾಕು
6. ಮುಖ ಮುರಿ
7. ಮೂಗಿಗೆ ಸುಣ್ಣ ಹಚ್ಚು
8. ಏಳು ಕೆರೆ ನೀರು ಕುಡಿದವ
9. ಚಳ್ಳೆ ಹಣ್ಣು ತಿನ್ನಿಸು
10. ಕಣ್ಣಲ್ಲಿ ರಕ್ತ ಬರು
Comments
ಉ: ರಸಪ್ರಶ್ನೆ- 1
In reply to ಉ: ರಸಪ್ರಶ್ನೆ- 1 by VeerendraC
ಉ: ರಸಪ್ರಶ್ನೆ- 1
In reply to ಉ: ರಸಪ್ರಶ್ನೆ- 1 by vinyasa
ಉ: ರಸಪ್ರಶ್ನೆ- 1